Publish Date: Sun, 17 Apr 2022 (09:38 IST)
Updated Date: Sun, 17 Apr 2022 (09:42 IST)
ಬೆಳಗಾವಿ: ಯುವತಿಯನ್ನು ಚುಡಾಯಿಸಬೇಡ ಎಂದು ಬುದ್ಧಿಮಾತು ಹೇಳಲು ಹೋಗಿದ್ದಕ್ಕೆ ಯುವಕನೋರ್ವ ಮಧ್ಯವಯಸ್ಕ ವ್ಯಕ್ತಿಯನ್ನು ಕೊಲೆ ಮಾಡಿದ್ದಾನೆ.
ಯುವತಿಯನ್ನು ಚುಡಾಯಿಸುತ್ತಿದ್ದ ಕುರಿತು ಗ್ರಾಮಸ್ಥರು ಸೇರಿಕೊಂಡು ಆರೋಪಿ ಭೀಮಪ್ಪನಿಗೆ ಬುದ್ಧಿ ಹೇಳಿದ್ದರು. ಹಾಗಿದ್ದರೂ ಆತ ಚಾಳಿ ಮುಂದುವರಿಸಿದ್ದ.
ಹೀಗಾಗಿ ಕೊಲೆಗೀಡಾದ ಆತನ ಸ್ನೇಹಿತ, 42 ವರ್ಷ ವಯಸ್ಸಿನ ವ್ಯಕ್ತಿ ಆರೋಪಿಗೆ ಬುದ್ಧಿ ಹೇಳಿದ್ದ. ಆದರೆ ಮಧ್ಯದ ಅಮಲಿನಲ್ಲಿದ್ದ ಆರೋಪಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.