Publish Date: Tue, 19 Apr 2022 (11:39 IST)
Updated Date: Tue, 19 Apr 2022 (08:00 IST)
ಹರ್ಯಾಣ: ಮದ್ಯದ ಅಮಲಿನಲ್ಲಿ ಮಾವ ಮತ್ತು ಅಳಿಯನ ನಡುವೆ ಕಿತ್ತಾಟವಾಗಿದ್ದು, ಅಳಿಯ ಮಾವನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
2014 ರಲ್ಲಿ ಪತ್ನಿ ತನ್ನನ್ನು ಬಿಟ್ಟು ಹೋಗಿ ಬೇರೊಬ್ಬನ ಜೊತೆ ವಾಸವಿದ್ದಳು. ಇದೇ ಕಾರಣಕ್ಕೆ ಅಳಿಯ ಪತ್ನಿಯನ್ನು ಕರೆತರಲು ಮಾವನ ಸಹಾಯ ಕೋರಿದ್ದ. ಆದರೆ ಮಾವ ಮಗಳನ್ನು ಕಳುಹಿಸಿಕೊಡಬೇಕಾದರೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ.
ಇದೇ ವಿಚಾರವಾಗಿ ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಕಿತ್ತಾಟವಾಗಿತ್ತು. ಈ ಸಂದರ್ಭದಲ್ಲಿ ಅಳಿಯ, ಮಾವನ ಪ್ರಾಣ ತೆಗೆದಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.