Publish Date: Sun, 17 Apr 2022 (16:05 IST)
Updated Date: Sun, 17 Apr 2022 (16:50 IST)
ಬೆಳಗಾವಿ : ವೈಭವ ನಗರದ ಸತ್ಯಸಾಯಿ ಕಾಲೋನಿಯಲ್ಲಿ ಕೇವಲ 250 ರೂ.ಗಾಗಿ ವ್ಯಕ್ತಿಯನ್ನು ಬಿಯರ್ ಬಾಟಲ್ ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರಾಯಿ ತರಲು ಕೊಟ್ಟಿದ್ದ ಹಣದಲ್ಲಿ ಉಳಿದ ಚಿಲ್ಲರೆ ಹಣ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ.
ವೈಭವ ನಗರದ ಸತ್ಯ ಸಾಯಿ ಕಾಲೋನಿ ನಿವಾಸಿ ಮಹಮ್ಮದ್ ದಿಲಾಪುಕಾರ ಶೇಖ್ (27) ಕೊಲೆಗೀಡಾಗಿದ ವ್ಯಕ್ತಿ. ಇದೇ ಕಾಲೋನಿಯ ಉಸ್ಮಾನ್ ಲಾಲ್ಸಾಬ್ ಶೇಖ್ ಕೊಲೆ ಮಾಡಿದ ಆರೋಪಿ ಎಂದು ತಿಳಿದುಬಂದಿದೆ.
ಸತ್ಯಸಾಯಿ ಕಾಲೋನಿಯಲ್ಲಿ ಉಸ್ಮಾನ್, ಮಹ್ಮದ್ನಿಗೆ 500 ರೂ. ಹಣ ಕೊಟ್ಟು ಸಾರಾಯಿ ತೆಗದುಕೊಂಡು ಬರುವಂತೆ ಹೇಳಿದ್ದಾನೆ. ಆಗ ಮಹಮ್ಮದ್ 250 ರೂ. ಕೊಟ್ಟು ಸಾರಾಯಿ ತಂದಿದ್ದಾನೆ.
ಉಳಿದ 250 ರೂ. ಚಿಲ್ಲರೆ ಹಣವನ್ನು ಉಸ್ಮಾನನಿಗೆ ಹಿಂದಿರುಗಿಸದಿದ್ದಾಗ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಜಗಳವಾಗಿದೆ. ಬಿಯರ್ ಬಾಟಲಿಯಿಂದ ಮಹಮ್ಮದ್ನ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.