Publish Date: Mon, 16 Jun 2025 (12:20 IST)
Updated Date: Mon, 16 Jun 2025 (12:24 IST)
ಬೆಂಗಳೂರು: ನಿಮ್ಮ ತಂದೆ ಮೈಸೂರಿಗೆ 5 ರೂಪಾಯಿ ಕೊಟ್ಟಿಲ್ಲ. ಮೊದಲು ಅವರಿಂದ ರಾಜೀನಾಮೆ ಕೊಡಿಸಿ ಎಂದು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯತೀಂದ್ರಗೆ ಪ್ರಶ್ನೆ ಮಾಡಿದ್ದಾರೆ. ಜಾತಿಗಣತಿ ಬಗ್ಗೆ ಯತೀಂದ್ರ ಸಿದ್ದರಾಮಯ್ಯಗೆ ಏನು ಗೊತ್ತು ಅಂತ ಮಾತನಾಡ್ತಿದ್ದಾರೆ? ಜಾತಿಗಣತಿಯನ್ನು ಲಿಂಗಾಯತರು ವಿರೋಧಿಸಿದರು. ರಾಜ್ಯದಲ್ಲಿ 39 ಲಿಂಗಾಯತ ಶಾಸಕರಿದ್ದಾರೆ. ಹಾಗಿದ್ದರೆ ಸಿದ್ದರಾಮಯ್ಯನವರು ರಾಜೀನಾಮೆ ಕೊಡ್ತಾರಾ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರು ಮೈಸೂರಿಗೆ 5 ರೂಪಾಯಿ ಕೆಲಸವನ್ನೂ ಮಾಡಿಲ್ಲ. ಜಾತಿಗಣತಿ ಎಲ್ಲಾ ಕುರ್ಚಿ ಉಳಿಸಿಕೊಳ್ಳುವ ನಾಟಕವಷ್ಟೇ. ಅಭಿವೃದ್ಧಿ ಎನ್ನುವುದು ಸಿದ್ದರಾಮಯ್ಯ ದೃಷ್ಟಿಕೋನದಲ್ಲೇ ಇಲ್ಲ ಎಂದಿದ್ದಾರೆ.