Select Your Language

Notifications

webdunia
webdunia
webdunia
webdunia

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಪ್ರಕಾಶ್ ರೈ ಗರಂ

ಅನಂತ ಕುಮಾರ್ ಹೆಗ್ಡೆ
ನವದೆಹಲಿ: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಹಿಂದುತ್ವದ ಬಗ್ಗೆ ನೀಡಿದ ಹೇಳಿಕೆಯೊಂದರ ಬಗ್ಗೆ ನಟ ಪ್ರಕಾಶ್ ರೈ ಕಿಡಿ ಕಾರಿದ್ದಾರೆ.
 

ಅನಂತ ಕುಮಾರ್ ಹೆಗ್ಡೆ ಹಿಂದುತ್ವ ಮತ್ತು ರಾಷ್ಟ್ರೀಯತೆ ಎನ್ನುವುದು ಒಂದೇ ಎಂದು ಹೇಳಿದ್ದರು. ಈ ಬಗ್ಗೆ ಪ್ರಶ್ನಿಸಿರುವ ಪ್ರಕಾಶ್ ರೈ ಹಾಗಿದ್ದರೆ ಹಿಂದೂಯೇತರರ ಬಗ್ಗೆ ನಿಮ್ಮ ಸಿದ್ಧಾಂತವೇನು ಎಂದು ಕಿಡಿ ಕಾರಿದ್ದಾರೆ.

ಹಿಂದುತ್ವದ ಬಗ್ಗೆ ಸಚಿವ ಹೆಗ್ಡೆ ಮಾತನಾಡಿರುವ ಭಾಷಣದ ವಿಡಿಯೋ ತುಣುಕು ಅಪ್ ಲೋಡ್ ಮಾಡಿರುವ ನಟ ಪ್ರಕಾಶ್ ರೈ, ಹಾಗಿದ್ದರೆ ಹಿಂದೂಯೇತರ ಧರ್ಮದಿಂದ ಬಂದು ದೇಶದ ಕೀರ್ತಿ ಉತ್ತುಂಗಕ್ಕೇರಿಸಿದ ಅಂಬೇಡ್ಕರ್, ಅಬ್ದುಲ್ ಕಲಾಂ, ಎಆರ್ ರೆಹಮಾನ್ ಮುಂತಾದವರ ಬಗ್ಗೆ ನಿಮ್ಮ ನಿಲುವೇನು? ಇವರೆಲ್ಲಾ ನಮ್ಮ ದೇಶದ ಹೆಮ್ಮೆಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ಯ್ರಾಕ್ಟರ್ -ಕಾರು ಡಿಕ್ಕಿ: ಮೂವರು ಸ್ಥಳದಲ್ಲೆ ಸಾವು