Publish Date: Mon, 13 Nov 2017 (08:32 IST)
Updated Date: Mon, 13 Nov 2017 (08:34 IST)
ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ ಮತ್ತೆ ರಾಜಕೀಯ ವಿಚಾರ ಮಾತನಾಡಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಬಗ್ಗೆ ಹರಡಿರುವ ಊಹಾಪೋಹಗಳಿಗೆ ಫುಲ್ ಸ್ಟಾಪ್ ನೀಡುವ ಪ್ರಯತ್ನ ನಡೆಸಿದ್ದಾರೆ.
ಪ್ರಕಾಶ್ ರೈ ರಾಜಕೀಯಕ್ಕೆ ಬರುತ್ತಾರೆ. ಅದಕ್ಕಾಗಿಯೇ ಇತ್ತೀಚೆಗೆ ಆಗಾಗ ರಾಜಕೀಯ ನಾಯಕರ ವಿರುದ್ಧ ಚಾಟಿ ಬೀಸುತ್ತಿದ್ದಾರೆ ಎಂಬ ಸುದ್ದಿಯಿತ್ತು. ಆದರೆ ಇದನ್ನು ಅವರು ನಿರಾಕರಿಸಿದ್ದಾರೆ.
ಯಾವುದೇ ನಟರ ಹೆಸರು ಪ್ರಸ್ತಾಪಿಸದೇ ನಟರು ರಾಜಕೀಯ ಬರುವುದೇ ದೊಡ್ಡ ದುರಂತ ಎಂದಿದ್ದಾರೆ. ನನ್ನ ಕರ್ತವ್ಯದ ಕುರಿತು ನನಗೆ ತಿಳುವಳಿಕೆಯಿದೆ. ರಾಜಕೀಯಕ್ಕೆ ಬರುವ ಅಗತ್ಯ ತನಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ