Publish Date: Sun, 12 Nov 2017 (08:30 IST)
Updated Date: Sun, 12 Nov 2017 (08:33 IST)
ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ತೇಜಸ್ವಿನಿ ಹೊರಬಿದ್ದಿದ್ದಾರೆ. ವಾರಂತ್ಯದಲ್ಲಿ ನಡೆಯುವ ವಾರದ ಕತೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಕಡಿಮೆ ವೋಟಿಂಗ್ ಬಂದ ಹಿನ್ನಲೆಯಲ್ಲಿ ತೇಜಸ್ವಿನ್ ಔಟ್ ಆಗಿದ್ದಾರೆ.
ವಿಶೇಷವೆಂದರೆ ತಮ್ಮ ತಂದೆಯ ಅನಾರೋಗ್ಯದ ಹಿನ್ನಲೆಯಲ್ಲಿ ತೇಜಸ್ವಿನಿ ಮೊನ್ನೆಯಷ್ಟೇ ಒಂದು ದಿನದ ಮಟ್ಟಿಗೆ ಮನೆಯಿಂದ ಹೊರ ನಡೆದಿದ್ದರು. ವಿಪರ್ಯಾಸವೆಂದರೆ ಮರಳಿ ಮನೆಗೆ ಬಂದ ಒಂದೇ ದಿನಕ್ಕೆ ನಾಮಿನೇಟ್ ಆಗಿ ಕಡಿಮೆ ವೋಟಿಂಗ್ ಬಂದ ಹಿನ್ನಲೆಯಲ್ಲಿ ಎಲಿಮಿನೇಟ್ ಆಗಿದ್ದಾರೆ.
ಆದರೆ ತೇಜಸ್ವಿನಿ ಹೊರಬಿದ್ದಿರುವುದಕ್ಕೆ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ವಿನಾಕಾರಣ ಧ್ವನಿಯೇರಿಸಿ ಜಗಳ ಕಾಯುವ ಜಗನ್ ರನ್ನು ಹೊರ ಹಾಕಬೇಕಿತ್ತು. ನಮಗೆ ವೋಟಿಂಗ್ ಡೀಟೈಲ್ ಕೊಡಿ ಎಂದು ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ