Publish Date: Tue, 14 Nov 2017 (08:33 IST)
Updated Date: Tue, 14 Nov 2017 (08:35 IST)
ಬೆಂಗಳೂರು: ತಾವು ನೀಡಿದ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿ ವರದಿ ಮಾಡಿದ ಮಾಧ್ಯಮಗಳ ವಿರುದ್ಧ ಬಹುಭಾಷಾ ತಾರೆ ಪ್ರಕಾಶ್ ರೈ ಕೆಂಡಾಮಂಡಲರಾಗಿದ್ದಾರೆ. ಟ್ವಿಟರ್ ನಲ್ಲಿ ಈ ಕುರಿತು ಸ್ಪಷ್ಟನೆಯನ್ನೂ ಪ್ರಕಟಿಸಿದ್ದಾರೆ.
ನಟರು ರಾಜಕೀಯ ಪ್ರವೇಶಿಸುವ ಕುರಿತು ಪ್ರಕಾಶ್ ರೈ ಮಾಧ್ಯಮ ಸಂವಾದದಲ್ಲಿ ಜನಪ್ರಿಯ ನಟರು ತಮ್ಮ ಜನಪ್ರಿಯತೆಯ ಆಧಾರದಲ್ಲಿ ರಾಜಕೀಯ ಪ್ರವೇಶಿಸುವುದು ತಪ್ಪು ಎಂದಿದ್ದರು. ಆದರೆ ಇದನ್ನು ಮಾಧ್ಯಮಗಳು ನಟರು ರಾಜಕೀಯ ಪ್ರವೇಶಿಸಬಾರದು ಎಂದು ಪ್ರಕಾಶ್ ರೈ ಹೇಳಿದ್ದಾರೆಂದು ವರದಿ ಮಾಡಿರುವುದು ಅವರ ಸಿಟ್ಟಿಗೆ ಕಾರಣವಾಗಿದೆ.
ನಟರಾದವರು ರಾಜಕೀಯಕ್ಕೆ ಬರಬಾರದು ಎಂದು ನಾನು ಹೇಳಿಲ್ಲ. ಆದರೆ ಜನಪ್ರಿಯತೆಯ ನಟ ಎನ್ನುವ ಕಾರಣಕ್ಕೆ ರಾಜಕೀಯಕ್ಕೆ ಬರುವುದು ತಪ್ಪು ಎಂದಿದ್ದೆ. ಆದರೆ ನನ್ನ ಮಾತನ್ನು ತಪ್ಪಾಗಿ ಗ್ರಹಿಸಿರುವ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ. ಹೀಗಾದರೆ ನಮ್ಮ ನಡುವಿನ ವಿಶ್ವಾಸಕ್ಕೆ ಬೆಲೆ ಎಲ್ಲಿದೆ ಎಂದು ಪ್ರಕಾಶ್ ರೈ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ