Publish Date: Thu, 09 Nov 2017 (08:36 IST)
Updated Date: Thu, 09 Nov 2017 (08:39 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಂ ಮದುವೆಯಾಗುತ್ತಾರಂತೆ. ಈಗಾಗಲೇ ಆಕೆಗೆ ಬಾಯ್ ಫ್ರೆಂಡ್ ಸಿಕ್ಕಿದ್ದಾರಂತೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.
ಇದಕ್ಕೆಲ್ಲಾ ಸ್ವತಃ ರಚಿತಾ ರಾಂ ಉತ್ತರಿಸಿದ್ದಾರೆ. ನನಗೆ ಬಾಯ್ ಫ್ರೆಂಡ್ ಇದ್ದಾರೆ, ಮದುವೆಯಾಗುತ್ತಿದದ್ದೇನೆ ಎಂಬ ಸುದ್ದಿಗಳೆಲ್ಲಾ ಸುಳ್ಳು. ನಾನು ಸದ್ಯಕ್ಕೆ ಸಿಂಗಲ್ ಆಗಿಯೇ ಇದ್ದೇನೆ. ಸಿನಿಮಾ ಕಡೆಗಷ್ಟೇ ಗಮನ ಹರಿಸಿದ್ದೇನೆ.
ಮದುವೆಯಾಗುವುದಿದ್ದರೂ ಎಲ್ಲರಿಗೂ ಹೇಳಿ ಮದುವೆಯಾಗುತ್ತೇನೆ. ಅದರಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ ಎಂದು ರಚಿತಾ ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ