Publish Date: Fri, 08 Dec 2017 (07:47 IST)
Updated Date: Fri, 08 Dec 2017 (07:51 IST)
ಕೋಲಾರ: ಟ್ಯ್ರಾಕ್ಟರ್ ಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವನಪ್ಪಿದ ಘಟನೆಯೊಂದು ಕೋಲಾರ ತಾಲೂಕಿನ ತಂಬಿಹಳ್ಳಿ ಗೇಟ್ ಬಳಿ ತಡರಾತ್ರಿಯಲ್ಲಿ ಸಂಭವಿಸಿದೆ.
ರಾಷ್ಟೀಯ ಹೆದ್ದಾರಿ 75ರಲ್ಲಿ ಮರಳು ತುಂಬಿದ ಟ್ಯ್ರಾಕ್ಟರ್ ಗೆ, ಹಿಂಬದಿಯಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೆ ಸಾವನಪ್ಪಿದ್ದು, ಅಫಘಾತದ ಬಳಿಕ ಟ್ಯ್ರಾಕ್ಟರ್ ನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಮೃತಪಟ್ಟ ಮೂವರ ಹೆಸರು, ವಿಳಾಸ, ಗುರುತು ಪತ್ತೆಯಾಗಿಲ್ಲ. ಕೆ.ಎ.01 ಎಬಿ1081 ಅಫಘಾತಕ್ಕಿಡಾದ ಮಾರುತಿ ಕಾರಿನ ಸಂಖ್ಯೆ. ಸಳ್ಥಕ್ಕೆ ಕೋಲಾರ ಗ್ರಾಮಾಂತರ ಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆರ್.ಎಲ್ ಜಾಲಪ್ಪ ಶವಗಾರಕ್ಕೆ ರವಾನಿಸಲಾಗಿದೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ