ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 30 ಕ್ಕೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಇದೀಗ ಮಗನಿಗಾಗಿ ಎಚ್ ಡಿ ರೇವಣ್ಣ ಭೀಷ್ಮ ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ.
ಹಾಸನದ ತೋಟದ ಮನೆ, ಸಂಸದರ ನಿವಾಸ ಸೇರಿದಂತೆ ಹಲವು ಕಡೆ ಪ್ರಜ್ವಲ್ ರೇವಣ್ಣ ಹಲವಾರು ಮಹಿಳೆಯರೊಂದಿಗೆ ಲೈಂಗಿಕ ದೌರ್ಜನ್ಯ, ಅತ್ಯಾಚಾರವೆಸಗಿದ ಆರೋಪದಡಿ ಬಂಧನವಾಗಿ ವರ್ಷವೇ ಕಳೆದಿದೆ. ಈಗಾಗಲೇ ತನಿಖಾ ತಂಡ ಚಾರ್ಜ್ ಶೀಟ್ ಸಲ್ಲಿಕೆ ಮಾಡಿ ಎರಡೂ ಕಡೆ ಲಾಯರ್ ಗಳು ವಾದ-ಪ್ರತಿವಾದ ಮಂಡಿಸಿದ್ದಾಗಿದೆ.
ಇದೀಗ ತೀರ್ಪಿನ ಸಮಯ. ಜುಲೈ 30 ಕ್ಕೆ ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ತೀರ್ಪು ನೀಡಲಿದೆ. ಇದೀಗ ಪ್ರಜ್ವಲ್ ಮಾತ್ರವಲ್ಲ ರೇವಣ್ಣ ಕುಟುಂಬಕ್ಕೇ ಎದೆಯೊಳಗೆ ಢವ ಢವ ಶುರುವಾಗಿದೆ. ತೀರ್ಪು ಏನಾಗುವುದೋ ಎಂಬ ಆತಂಕವಿದೆ.
ಈ ನಡುವೆ ಮಗನಿಗಾಗಿ ಎಚ್ ಡಿ ರೇವಣ್ಣ ಶಪಥವೊಂದನ್ನು ಮಾಡಿದ್ದಾರೆ. ಎಚ್ ಡಿ ರೇವಣ್ಣ ಸ್ವಲ್ಪ ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿ. ಈಗ ಮಗನ ಬಿಡುಗಡೆಗಾಗಿ ದೇವರ ಮೊರೆ ಹೋಗಿದ್ದು ಮಗ ಬಿಡುಗಡೆಯಾಗುವವರೆಗೂ ಮಾಂಸ ಮುಟ್ಟಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಪ್ರಜ್ವಲ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದರೆ ಕನಿಷ್ಠ 10 ವರ್ಷ ಅಥವಾ ಗರಿಷ್ಠ ಜೀವಾವಧಿ ಶಿಕ್ಷೆಗೂ ಒಳಗಾಗಬಹುದು. ಹೀಗಾಗಿ ರೇವಣ್ಣ ಕುಟುಂಬದಲ್ಲಿ ಆತಂಕವಿದೆ.