ಬೆಂಗಳೂರು: ಒಂದು ವೇಳೆ ನಿಖಿಲ್ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡದೆ ಇರುತ್ತಿದ್ದರೆ ಕುಮಾರಸ್ವಾಮಿ ಮಗ ಹೆದರಿ ಓಡಿ ಹೋದ ಎಂದು ಹೇಳುತ್ತಿದ್ದರು ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ದೇವೇಗೌಡರ ಕುಟುಂಬ ಎಂದೂ ಹಿಂಬಾಗಿಲಿನಿಂದ ರಾಜಕಾರಣಕ್ಕೆ ಬಂದಿಲ್ಲ. ಅಧಿಕಾರಕ್ಕೆ ಅಂಟಿ ಕೂರುವ ಕುಟುಂಬ ನಮ್ಮದಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಥಳೀಯರನ್ನೇ ಕಣಕ್ಕೆ ಇಳಿಸುತ್ತೇವೆ ಎಂದು ಹೇಳಿದ್ದೇವು. ನಾವು ಯೋಗೇಶ್ವರ್ಗೆ ಕೊನೆ ಘಳಿಗೆವರೆಗೂ ಅವಕಾಶ ನೀಡಿದ್ವಿ, ಆದರೆ ಯೋಗೇಶ್ವರ್ ಕಾಂಗ್ರೆಸ್ಗೆ ಸೇರಿದ್ರು ಎಂದರು.
ಕಾಂಗ್ರೆಸ್ಗೆ ಕ್ಯಾಂಡಿಡೇಟ್ ಇಲ್ಲದೆ ದಮ್ಮಯ್ಯ, ದಕ್ಕಯ್ಯ ಹಾಕಿ ಯೋಗೇಶ್ವರ್ ನಿಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿದಿನ ಕತ್ತಲೆ ಆಗುತ್ತೆ ಬೆಳಗಾಗುತ್ತೆ. ಕಾಲ ಚಕ್ರ ಹೀಗೆ ಇರುವುದಿಲ್ಲ. ನಿಖಿಲ್ ನಿಲ್ಲಿಸದಿದ್ರೆ ಕದ್ದು ಓಡಿ ಹೋದ ಅನ್ನುತ್ತಿದ್ರು ಎಂದು ಕೌಂಟರ್ ಕೊಟ್ಟಿದ್ದರು.