Select Your Language

Notifications

webdunia
webdunia
webdunia
webdunia

ನೆರೆಮನೆಯವಳನ್ನು ಎಳೆದಾಡಿ ಹಲ್ಲೆ ಮಾಡಿದ ಮೊಹಮ್ಮದ್ ಶಮಿ ಮಾಜಿ ಪತ್ನಿ: ವಿಡಿಯೋ ವೈರಲ್

Mohammed Shami wife

Krishnaveni K

ಕೋಲ್ಕತ್ತಾ , ಶನಿವಾರ, 19 ಜುಲೈ 2025 (09:59 IST)
Photo Credit: X
ಕೋಲ್ಕತ್ತಾ: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಮಾಜಿ ಪತ್ನಿ ಹಸೀನ್ ಜಹಾನ್ ನೆರೆಮನೆಯವರ ಜೊತೆ ಜಾಗದ ವಿಚಾರಕ್ಕೆ ಕಿತ್ತಾಡಿಕೊಂಡಿದ್ದು ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಮೊಹಮ್ಮದ್ ಶಮಿ ಜೊತೆಗೆ ವಿಚ್ಛೇದನದ ಬಳಿಕ ಜೀವನಾಂಶ ವಿಚಾರವಾಗಿ ಕೋರ್ಟ್ ತೀರ್ಪು ನೀಡಿದ್ದರ ಬಗ್ಗೆ ಹಸೀನ್ ಜಹಾನ್ ಅಸಮಾಧಾನ ವ್ಯಕ್ತಪಡಿಸಿ ಸುದ್ದಿಯಾಗಿದ್ದರು. ಕೋರ್ಟ್ 4 ಲಕ್ಷ ರೂ. ಮಾಸಿಕ ಜೀವನಾಂಶ ನೀಡಲು ಆದೇಶಿಸಿತ್ತು. ಆದರೆ ಇದು ಸಾಲಲ್ಲ ಎಂದು ಹಸೀನ್ ಜಹಾನ್ ತಗಾದೆ ತೆಗೆದಿದ್ದರು.

ಇದೀಗ ಶಮಿ ಪತ್ನಿ ಹಸೀನ್ ಜಹಾನ್ ಜಾಗದ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಹಸೀನ್ ಜಹಾನ್ ವಿವಾದಿತ ಜಾಗದಲ್ಲಿ ಮನೆ ಕಟ್ಟಿಸುತ್ತಿದ್ದಾರೆ. ಈ ಬಗ್ಗೆ ನೆರೆಮನೆಯಾಕೆ ಅಪಸ್ವರವೆತ್ತಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹಸೀನ್ ನೆರೆಮನೆಯಾಕೆಯನ್ನು ಎಳೆದಾಡಿ ಹಲ್ಲೆ ನಡೆಸುತ್ತಿದ್ದಾರೆ. ಇದೀಗ ಹಸೀನ್ ಜಹಾನ್ ಮೇಲೆ ಪ್ರಕರಣ ದಾಖಲಿಸಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಕ್ಲು ಶಿವು ಮರ್ಡರ್ ಕೇಸ್: ಬೈರತಿ ಬಸವರಾಜು ಬಂಧಿಸಲು ಪೊಲೀಸರಿಗೆ ಸಿಕ್ಕಿದೆ ಅಸ್ತ್ರ