Select Your Language

Notifications

webdunia
webdunia
webdunia
webdunia

ರಾಯಚೂರು: ಫೋಟೋ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದಳಾ ಪತಿ: ವಿಡಿಯೋ

Raichur

Krishnaveni K

ರಾಯಚೂರು , ಶನಿವಾರ, 12 ಜುಲೈ 2025 (14:46 IST)
Photo Credit: X
ರಾಯಚೂರು: ಜಿಲ್ಲೆಯಲ್ಲಿ ಫೋಟೋ ತೆಗೆಯುವ ನೆಪದಲ್ಲಿ ಪತ್ನಿಯೇ ಪತಿಯನ್ನು ನದಿಗೆ ತಳ್ಳಿದ ಆರೋಪ ಎದುರಾಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರಾಯಚೂರು ಜಿಲ್ಲೆಯ ಗುರ್ಜಾಪುರ ಬ್ರಿಡ್ಜ್ ನಲ್ಲಿ ಘಟನೆ ನಡೆದಿದೆ. ಮಳೆಗಾಲವಾಗಿರುವುದರಿಂದ ನದಿಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಫೋಟೋ ತೆಗೆಯುವ ನೆಪದಲ್ಲಿ ಪತಿ ಬ್ರಿಡ್ಜ್ ನ ತುದಿಯಲ್ಲಿ ನಿಂತಿದ್ದಾಗ ಪತ್ನಿಯೇ ನದಿಗೆ ತಳ್ಳಿದ್ದಾಳೆ ಎನ್ನಲಾಗಿದೆ.

ನದಿಗೆ ಬಿದ್ದ ಪತಿ ಈಜಿ ಬಂಡೆ ಮೇಲೆ ನಿಂತು ಕಾಪಾಡಿ ಎಂದು ಸ್ಥಳೀಯರ ಮುಂದೆ ಅಂಗಲಾಚಿದ್ದಾನೆ. ವಿಶೇಷವೆಂದರೆ ಪತ್ನಿಯೂ ಸೇತುವೆಯಲ್ಲಿ ನಿಂತು ನೋಡುತ್ತಿದ್ದಳು. ಸ್ಥಳೀಯರು ಪ್ರಶ್ನಿಸಿದಾಗ ನಾನೇನು ಮಾಡಿಲ್ಲ. ಬ್ರಿಡ್ಜ್ ತುದಿಗೆ ನಿಂತು ಫೋಟೋ ತೆಗೆಯಲು ಯತ್ನಿಸಿದಾಗ ಬಿದ್ದರು ಎಂದಿದ್ದಾಳೆ.

ಆದರೆ ಪತಿ ತಾತಪ್ಪ ನನ್ನನ್ನು ಪತ್ನಿಯೇ ತಳ್ಳಿದ್ದಾಳೆ ಎಂದು ಆರೋಪಿಸಿದ್ದಾನೆ. ಕಳೆದ ಏಪ್ರಿಲ್ ನಲ್ಲಿ ಇಬ್ಬರೂ ಮದುವೆಯಾಗಿದ್ದರು. ಆದರೆ ಮದುವೆಯಾದಾಗಿನಿಂದಲೂ ಇಬ್ಬರ ಸಂಸಾರ ಸರಿ ಇರಲಿಲ್ಲ. ವೈಮನಸ್ಯದಿಂದಲೇ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಪತ್ನಿ ಗದ್ದೆಮ್ಮ ಪತಿಯೇ ಕಾಲು ಜಾರಿ ಬಿದ್ದಿರುವುದಾಗಿ ಹೇಳಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ತಾಯಿ ಹುಲಿಯ ನಿರ್ಲಕ್ಷ್ಯಕ್ಕೆ ಮೂರು ಮರಿಗಳು ಸಾವು