ತಿರುವನಂತಪುರಂ: 18 ಅಡಿ ಉದ್ದದ ಕಾಳಿಂಗ ಸರ್ಪವನ್ನು ಏಕಾಂಗಿ ಸೆರೆಹಿಡಿದ ಮಹಿಳಾ ಅಧಿಕಾರಿಯೊಬ್ಬರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೇರಳದ ತಿರುವನಂತಪುರಂನಲ್ಲಿ ಘಟನೆ ನಡೆದಿದೆ.
ತಿರುವನಂತಪುರಂನ ಅಂಜುಮರುತ್ತಮೂಡು ಎಂಬದಲ್ಲಿ ಘಟನೆ ನಡೆದಿದೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿದ್ದ 18 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ. ಕೇರಳದ ಅರಣ್ಯ ಇಲಾಖೆ ಅಧಿಕಾರಿ ರೋಶಿನಿ ಈ ಕೆಲಸ ಮಾಡಿದ್ದಾರೆ.
ಅವರ ಜೊತೆಗೆ ಬೇರೆ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು. ಆದರೆ ಯಾರ ಸಹಾಯವೂ ಇಲ್ಲದೇ ಸ್ವತಃ ತಾವೇ ಬೃಹತ್ ಗಾತ್ರದ ಕಾಳಿಗ ಸರ್ಪವನ್ನು ಏಕಾಂಗಿಯಾಗಿ ಸೆರೆಹಿಡಿದು ಚೀಲದೊಳಗೆ ತುಂಬಿಸಿದ್ದಾರೆ. ಅವರು ಯಶಸ್ವಿಯಾಗಿ ಕೆಲಸ ಮುಗಿಸುತ್ತಿದ್ದಂತೇ ಸುತ್ತಲಿದ್ದವರು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.
ಅಂದ ಹಾಗೆ ರೋಶಿನಿ ಈಗಾಗಲೇ ಸುಮಾರು 800 ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರಂತೆ. ಆದರೆ ಕಾಳಿಂಗ ಸರ್ಪವನ್ನು ಹಿಡಿದಿದ್ದು ಇದೇ ಮೊದಲು ಎನ್ನಲಾಗಿದೆ. ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ.