ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಕೆಆರ್ ಪುರಂ ಶಾಸಕ ಬೈರತಿ ಬಸವರಾಜು ಬಂಧಿಸಲು ಪೊಲೀಸರಿಗೆ ಪ್ರಮುಖ ಅಸ್ತ್ರ ಸಿಕ್ಕಿದೆ.
ರೌಡಿಶೀಟರ್ ಬಿಕ್ಲು ಶಿವು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಈಗಾಗಲೇ ಬಂಧಿಸಲಾಗಿದೆ. ಶಾಸಕ ಬಸವರಾಜ್ ಪ್ರಕರಣದಲ್ಲಿ ಎ5 ಎಂದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರು ಎಫ್ಐಆರ್ ದಾಖಲಿಸುತ್ತಿದ್ದಂತೇ ಶಾಸಕರು ತಮ್ಮ ವಿರುದ್ಧ ಎಫ್ಐಆರ್ ಗೆ ತಡೆ ಕೋರಿ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಆದರೆ ಹೈಕೋರ್ಟ್ ಮನವಿ ತಿರಸ್ಕರಿಸಿದ್ದು ಶಾಸಕರನ್ನು ಬಂಧಿಸಬಾರದು ಎಂಬ ಅಂಶವನ್ನೂ ಉಲ್ಲೇಖಿಸಿಲ್ಲ. ಇದು ಸಚಿವರಿಗೆ ಬಂಧನ ಭೀತಿಯನ್ನು ತಂದೊಡ್ಡಿದೆ. ಇಂದು 11.30 ಕ್ಕೆ ಭಾರತಿ ನಗರ ಪೊಲೀಸ್ ಠಾಣೆಗೆ ಶಾಸಕರು ವಿಚಾರಣೆಗೆ ಹಾಜರಾಗಬೇಕಿದೆ.
ಒಂದು ವೇಳೆ ಪ್ರಕರಣದಲ್ಲಿ ಸಚಿವರ ಕೈವಾಡವಿದೆ ಎಂದು ಪೊಲೀಸರಿಗೆ ಮೇಲ್ನೋಟಕ್ಕೆ ಅನಿಸಿದರೆ ಬಂಧಿಸಲೂ ಅವಕಾಶ ಸಿಕ್ಕಂತಾಗಿದೆ. ಹೀಗಾಗಿ ಈಗ ಶಾಸಕರಿಗೆ ಢವ ಢವ ಶುರುವಾಗಿದೆ.