Publish Date: Thu, 18 Jan 2018 (16:35 IST)
Updated Date: Thu, 18 Jan 2018 (16:37 IST)
ಬೆಂಗಳೂರು: ನಟ ಪ್ರಕಾಶ್ ರೈ ಮತ್ತೊಮ್ಮೆ ನೇರವಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ಈ ಇಬ್ಬರೂ ಧುರೀಣರೂ ನಿಜವಾದ ಹಿಂದೂಗಳಲ್ಲ ಎಂದು ಅವರು ಕಿಡಿಕಾರಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಕಾಶ್ ರೈ ಕೊಲೆಗಳನ್ನು ಬೆಂಬಲಿಸುವವರು, ಕೊಲೆಗಳ ಬಗ್ಗೆ ಮೌನ ವಹಿಸುವವರು ನಿಜವಾದ ಹಿಂದೂಗಳಲ್ಲ ಎಂದಿದ್ದಾರೆ.
‘ಅವರು ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ. ಆದರೆ ಮೋದಿ ವಿರೋಧಿ, ಶಾ ವಿರೋಧಿ, ಅನಂತಕುಮಾರ್ ಹೆಗ್ಡೆ ವಿರೋಧಿ. ಇವರೆಲ್ಲಾ ಹಿಂದೂಗಳಲ್ಲ. ಹತ್ಯೆಗಳನ್ನು ಬೆಂಬಲಿಸುವವರು ಹಿಂದೂಗಳಲ್ಲ’ ಎಂದು ಪ್ರಕಾಶ್ ರೈ ಕಿಡಿ ಕಾರಿದ್ದಾರೆ.
‘ನನ್ನ ಗೆಳತಿ ಗೌರಿ ಲಂಕೇಶ್ ಹತ್ಯೆಯಾದಾಗ ಕೆಲವರು ಟ್ವಿಟರ್ ನಲ್ಲಿ ಸಂಭ್ರಮಿಸಿದರು. ಅವರೆಲ್ಲಾ ಮೋದಿ ಹಿಂಬಾಲಕರು. ನನ್ನ ಸಮಸ್ಯೆ ಇರುವುದು, ಆಕೆಯನ್ನುಯಾರು ಕೊಂದರು ಎಂದಲ್ಲ. ಆದರೆ ಅದಕ್ಕಿಂತಲೂ ಹೆಚ್ಚು ಹೇಯ ಕೃತ್ಯವೆಂದರೆ ಅದನ್ನು ಸಂಭ್ರಮಿಸುವುದು. ಇವರೆಲ್ಲಾ ಹಿಂದೂಗಳಲ್ಲ’ ಎಂದು ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ