Publish Date: Mon, 15 Jan 2018 (11:08 IST)
Updated Date: Mon, 15 Jan 2018 (11:10 IST)
ಬೆಂಗಳೂರು: ಮಹದಾಯಿ ನದಿ ನೀರಿನ ವಿವಾದದ ಕುರಿತಾಗಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸಬಹುದು. ಈ ಬಗ್ಗೆ ನಾನು ಅವರಿಗೆ ಎಷ್ಟು ಹೇಳಿದರೂ ಕಿವಿ ಮೇಲೆ ಹಾಕಿಕೊಳ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ದೂರಿದ್ದಾರೆ.
ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ನಾನು ತುಂಬಾ ಸಲ ಪ್ರಧಾನಿಗೆ ಹೇಳಿದ್ದೇನೆ. ಆದರೆ ಅವರು ಹಿಂದೆ ಮುಂದೆ ಯೋಚಿಸ್ತಿದ್ದಾರೆ ಎಂದು ದೇವೇಗೌಡರು ಹೇಳಿದ್ದಾರೆ.
‘ಹಿಂದೆ ಕಾವೇರಿ ನದಿ ನೀರಿಗಾಗಿ ಉಪವಾಸ ಸತ್ಯಾಗ್ರಹ ನಡೆಸಿ ಹೋರಾಟ ಮಾಡಿದ್ದೇನೆ. ಇದೀಗ ಮಹದಾಯಿ ವಿವಾದ ಆ ಹಂತ ತಲುಪಿಲ್ಲ. ಒಂದು ವೇಳೆ ತಲುಪಿದರೆ ಯಾವುದೇ ರೀತಿಯ ಹೋರಾಟಕ್ಕೂ ಹಿಂಜರಿಯುವುದಿಲ್ಲ. ರಾಜ್ಯದ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಸಿದ್ಧ’ ಎಂದು ಮಾಜಿ ಪ್ರಧಾನಿ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ