Publish Date: Tue, 16 Jan 2018 (16:53 IST)
Updated Date: Tue, 16 Jan 2018 (16:55 IST)
ಬೆಂಗಳೂರು: ಇತ್ತೀಚೆಗೆ ಬಲಪಂಥೀಯರ ವಿರುದ್ಧ ಕಿಡಿ ಕಾರುತ್ತಿರುವ ನಟ ಪ್ರಕಾಶ್ ರೈ ವಿರುದ್ಧ ಬಿಜೆಪಿ ಕಾರ್ಯಕರ್ತರು ವಿಶಿಷ್ಟವಾಗಿ ಪ್ರತಿಭಟಿಸಿದ್ದಾರೆ. ವೇದಿಕೆಯನ್ನು ಗೋಮೂತ್ರ ಹಾಕಿ ಸ್ವಚ್ಛಗೊಳಸಿದ್ದಾರೆ.
ಸಿರ್ಸಿಯಲ್ಲಿ ಕಾರ್ಯಕ್ರಮವೊಂದರಲ್ಲಿ ನಟ ಪ್ರಕಾಶ್ ರೈ ಭಾಷಣ ಮಾಡಿದ್ದರು. ಆ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ಅವರು ತೆರಳಿದ ನಂತರ ಗೋಮೂತ್ರ ಹಾಕಿ ಶುಚಿಗೊಳಿಸಿದ್ದರು. ಇದಕ್ಕೆ ಟ್ವಿಟರ್ ನಲ್ಲಿ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.
‘ನಾನು ಸಿರ್ಸಿಯಲ್ಲಿ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ಗೋ ಮೂತ್ರ ಹಾಕಿ ಶುದ್ಧಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ನಾನು ಹೋದಲೆಲ್ಲಾ ಶುಚಿ ಕಾರ್ಯ ನಡೆಯುತ್ತಾ?’ ಎಂದು ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ