Select Your Language

Notifications

webdunia
webdunia
webdunia
webdunia

‘ಒಬಿಸಿಯವರ ಮನೆಗೆ ಹೋಗದ ಸಿಎಂ ಸಿದ್ದರಾಮಯ್ಯ ಮುಸ್ಲಿಮರು ಸತ್ತಾಗ ಮನೆಗೆ ಹೋದರು’

ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಬಿಜೆಪಿ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಧೋರಣೆಗೆ ಈಶ್ವರಪ್ಪ ಕ್ಯಾತೆ ತೆಗೆದಿದ್ದಾರೆ.
 

‘ಸಿದ್ದರಾಮಯ್ಯ  ಸಿಎಂ ಆದ ಮೇಲೆ ಎಷ್ಟು ಜನ ಒಬಿಸಿ ಪಂಗಡಕ್ಕೆ ಸೇರಿದವರ ಸಾವಾಗಿದೆ. ಆದರೂ ಸಿಎಂ ಅವರ ಮನೆಗೆ ಭೇಟಿ ನೀಡಿಲ್ಲ. ಆದರೆ ಮೊನ್ನೆ ಮಂಗಳೂರಿನಲ್ಲಿ ಮುಸ್ಲಿಮರೊಬ್ಬರು ಸತ್ತಾಗ ಅವರ ಮನೆಗೆ ಭೇಟಿಕೊಟ್ರು. ಅದೇ ಸಂದರ್ಭದಲ್ಲಿ ಯಾರಾದ್ರೂ ಏನಾದ್ರೂ ತಿಳ್ಕೊಂಡ್ರೆ ಎಂದು ಬಿಜೆಪಿ ಕಾರ್ಯಕರ್ತ ಹತ್ಯೆಗೀಡಾದ ದೀಪಕ್ ಮನೆಗೂ ಭೇಟಿ ನೀಡಿದ್ದರು ಅಷ್ಟೇ’ ಎಂದು ಈಶ್ವರಪ್ಪ ಕುಟುಕಿದ್ದಾರೆ.

ಇದೇ ಸಿಎಂ ವರಸೆಯನ್ನು ತೋರಿಸುತ್ತದೆ. ಮುಸ್ಲಿಮರನ್ನು ಮತಕ್ಕಾಗಿ ಸಿಎಂ ಓಲೈಸುತ್ತಿದ್ದಾರೆ ಎಂದು ಈಶ್ವರಪ್ಪ ಟೀಕಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಸರ್ವಾಧಿಕಾರಿ ಧೋರಣೆ ಬಿಡಲಿ ಎಂದ ಶೋಭಾ