Select Your Language

Notifications

webdunia
webdunia
webdunia
webdunia

ವಾಟ್ಸಾಪ್ ಗ್ರೂಪ್ ವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಚಿಂಪಾಜಿಗೆ ಹೋಲಿಸಿದವರು ಯಾರು...?

ವಾಟ್ಸಾಪ್ ಗ್ರೂಪ್ ವೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಚಿಂಪಾಜಿಗೆ ಹೋಲಿಸಿದವರು ಯಾರು...?
ಬೆಂಗಳೂರು , ಬುಧವಾರ, 10 ಜನವರಿ 2018 (13:05 IST)
ಬೆಂಗಳೂರು : ಸಿಎಂ ಸಿದ್ದರಾಮಯ್ಯ  ಅವರನ್ನು ವಾಟ್ಸಾಪ್ ಗ್ರೂಪ್ ವೊಂದರಲ್ಲಿ ಚಿಂಪಾಜಿಗೆ ಹೋಲಿಸಿ ವಿಡಿಯೋ ಪೋಸ್ಟ್ ಮಾಡಿ ಅವಮಾನ  ಮಾಡಿದ ಘಟನೆಯೊಂದು ನಡೆದಿದೆ.

 
ಹುಬ್ಬಳ್ಳಿ- ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ಮೋಹನ್ ಹಿರೇಮನಿ ಅವರು ಈ ಕೃತ್ಯ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ವಿಡಿಯೋ ಮಹಿಳಾ ಕಾಂಗ್ರೆಸ್ ಗ್ರೂಪ್ ವೊಂದರಲ್ಲಿ ಪೋಸ್ಟ್ ಆಗಿದ್ದು, ಗ್ರೂಪ್ ಸದಸ್ಯರು ಮೋಹನ್ ಹಿರೇಮನಿ ಅವರನ್ನುತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೆ ಅವರನ್ನು ಗ್ರೂಪ್ ಅಡ್ಮಿನ್ ಅವರು ಆ ಗ್ರೂಪ್ ನಿಂದ  ಹೊರಹಾಕಿದ್ದಾರೆ. ಈ ಗ್ರೂಪ್ ನಲ್ಲಿ ಡಿ.ಕೆ.ಶಿವಕುಮಾರ್, ಸಂತೋಷ್ ಲಾಡ್, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸದಸ್ಯರಾಗಿದ್ದಾರೆ.

 
ಆದರೆ ಮೋಹನ್ ಹಿರೇಮನಿ ಅವರು ಈ ಆರೋಪವನ್ನು ನಿರಾಕರಿಸಿದ್ದು, ನಾನು ಪೋಸ್ಟ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಆರ್‌ಎಸ್‌ಎಸ್‌, ಭಜರಂಗದಳದವರೇ ಉಗ್ರಗಾಮಿಗಳು– ಸಿಎಂ