Publish Date: Thu, 18 Jan 2018 (12:13 IST)
Updated Date: Thu, 18 Jan 2018 (12:22 IST)
ಬೆಳಗಾವಿ: ಜಾಧವ ನಗರದಲ್ಲಿ ರಾತ್ರಿ ಹೊತ್ತು ಮುಖಕ್ಕೆ ಮುಸುಕು ಹಾಕಿಕೊಂಡು ಮನೆ ಮುಂದೆ ನಿಲ್ಲಿಸಿದ ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದ ಸೈಕೋ ಡಾಕ್ಟರ್ ಈಗ ಪೊಲೀಸರು ಬೀಸಿದ ಬಲೆಗೆ ಬಿದ್ದಿದ್ದಾನೆ.
ರಾತ್ರಿ ವೇಳೆಯಲ್ಲಿ ಏಳು ಕಾರುಗಳಿಗೆ ಬೆಂಕಿ ಹಚ್ಚಿದ ಘಟನೆ ಬಳಿಕ ಆರೋಪಿಗಳ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ರಚಿಸಿದ 24 ಘಂಟೆಯೊಳಗೆ ಕಾರಿಗೆ ಬೆಂಕಿ ಹಚ್ಚುವ ಸೈಕೋ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಸೈಕೋ ಬೆಳಗಾವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ವೈದ್ಯ ಎಂಬ ಮಾಹಿತಿ ತಿಳಿದುಬಂದಿದೆ.
ಕಲಬುರ್ಗಿ ಮೂಲದ ವೈದ್ಯ ಅಮಿತ್ ಗಾಯಕವಾಡ್ ಎಂಬಾತನನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಆರೋಪಿ ಯಾವ ಕಾರಣಕ್ಕಾಗಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ಎನ್ನುವ ವಿಷಯ ತಿಳಿಯಬೇಕಾಗಿದೆಯಷ್ಟೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ