Select Your Language

Notifications

webdunia
webdunia
webdunia
webdunia

ಕುಪೇಂದ್ರ ರೆಡ್ಡಿ ಹೇಳಿಕೆಗೆ ಪರಮೇಶ್ವರ್ ಟಾಂಗ್

ಕುಪೇಂದ್ರ ರೆಡ್ಡಿ ಹೇಳಿಕೆಗೆ ಪರಮೇಶ್ವರ್ ಟಾಂಗ್
ಬೆಂಗಳೂರು , ಸೋಮವಾರ, 13 ಮೇ 2019 (13:50 IST)
ರಾಜ್ಯದ ಮೈತ್ರಿ ನಾಲ್ಕು ವರ್ಷ ಮುಂದುವರಿಯಬೇಕಿದೆ. ಹೀಗಾಗಿ ಇಂತಹ ಹೇಳಿಕೆ ಮುಂದುವರಿಯಬಾರದು ಅಂತ ಡಿಸಿಎಂ ಹೇಳಿದ್ದಾರೆ.

ನಮ್ಮಲ್ಲೂ ಇಂತಹ ಹೇಳಿಕೆ ನೀಡುವುದು ತಪ್ಪು. ಸಿಎಂ, ಸರ್ಕಾರದ ವಿರುದ್ಧ ಹೇಳಿಕೆ ಕೊಡುವುದಿದ್ದರೆ ನಿಲ್ಲಿಸಬೇಕು. ಅಂತರಿಕ ಭಿನ್ನಾಭಿಪ್ರಾಯವಿದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ನಮ್ಮ ಪ್ರಧಾನ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಬಹುದು ಅಂತ ಜೆಡಿಎಸ್ ನಾಯಕರಿಗೆ ಡಿಸಿಎಂ ಪರಮೇಶ್ವರ್ ಸಲಹೆ ನೀಡಿದ್ದಾರೆ.

ವಿಶ್ವನಾಥ್ ಜನತಾದಳದ ಅಧ್ಯಕ್ಷರು. ಅವರಿಗೆ ಹಾಗೂ ಸಿದ್ದರಾಮಯ್ಯಗೆ ವಯಕ್ತಿಕ ವ್ಯತ್ಯಾಸ ಇರಬಹುದು. ರಾಜಕೀಯವಾಗಿ ನಾವು ಮೈತ್ರಿ ಸರ್ಕಾರ ನಡೆಸುತ್ತಿದ್ದೇವೆ. ಆ ಪಕ್ಷದ ಅಧ್ಯಕ್ಷರಾಗಿ ಸಮನ್ವಯ ಸಮಿತಿ ಅಧ್ಯಕ್ಷರ ಬಗ್ಗೆ ಲಘವಾಗಿ  ಮಾತನಾಡಿದ್ದು ಸರಿಯಲ್ಲ ಎಂದರು.

ಕುಪೇಂದ್ರ ರೆಡ್ಡಿಯವರೊಂದಿಗೆ ನಾವು ಸಮ್ಮಿಶ್ರ ಮಾಡಿಕೊಂಡಿಲ್ಲ. ಜನತಾದಳದಿಂದ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಜೆಡಿಎಸ್ ವರಿಷ್ಠರ ಜೊತೆ ಒಪ್ಪಂದ ಆಗಿರೋದು. ಕುಪೇಂದ್ರ ರೆಡ್ಡಿ ಅವರ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಅವರ ದಾರಿ ಅವರು ನೋಡಿಕೊಳ್ಳಲಿ ಎಂದಿದ್ದರು ಕುಪೇಂದ್ರ ರೆಡ್ಡಿ. ಕುಪೇಂದ್ರ ರೆಡ್ಡಿ ಹೇಳಿಕೆಗೆ ಪರಮೇಶ್ವರ್ ಟಾಂಗ್ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯದ್ದು ಪೇಶೆಂಟ್ ಇಲ್ಲದ ಕಮಲ ನರ್ಸಿಂಗ್ ಹೋಂ