ಗಂಡ ಇಲ್ಲದ ಹೆಣ್ಣು, ಪತ್ನಿ ಕಳೆದುಕೊಂಡ ಗಂಡು ಸೇರಿದ್ದೇ ಮೈತ್ರಿ ಸರಕಾರವಂತೆ!

ಸೋಮವಾರ, 13 ಮೇ 2019 (12:48 IST)
ಗಂಡ ಕಳೆದುಕೊಂಡ ಹೆಣ್ಣು, ಇನ್ನೊಂದು ಹೆಂಡತಿ ಕಳೆದುಕೊಂಡ ಗಂಡು ಇವರಿಬ್ಬರೂ ಸೇರಿ ಮದುವೆಯಾಗಿದ್ದಾರೆ. ಇದೇ ರಾಜ್ಯದ ಮೈತ್ರಿ ಸರಕಾರ. ಒತ್ತಾಯಪೂರ್ವಕ ಮೈತ್ರಿ ಮದುವೆಯಾಗಿದೆ ಅಂತ ಬಿಜೆಪಿ ಶಾಸಕ ವ್ಯಂಗ್ಯವಾಡಿದ್ದಾರೆ.

ರಾಜ್ಯದ ಜನ ನಿಜವಾದ ಜನಾದೇಶ ಬಿಜೆಪಿಗೆ ಕೊಟ್ಟಿದ್ದಾರೆ. ಆದರೆ ಕಾಂಗ್ರೆಸ್- ಜೆಡಿಎಸ್ ಗೆ ಕೊಟ್ಟಿರಲಿಲ್ಲ. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಜಬರದಸ್ತಿ ಮದುವೆ ಮಾಡಿಕೊಂಡಿದ್ದಾರೆ. ತತ್ವ ಸಿದ್ಧಾಂತ ಏನು ಇಲ್ಲ. ರಾಜ್ಯದ ಜನ ಅಕ್ಷತೆಯೂ ಹಾಕಿಲ್ಲ. ಹೀಗಂತ ಕಲಬುರಗಿಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಬಗ್ಗೆ ಹೆಚ್. ವಿಶ್ವನಾಥ್ ಹೇಳಿಕೆ ನೀಡಿರೋದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಈ ಸಂಸಾರ ಇಷ್ಟು ದಿನ ನಡೆದಿದ್ದೇ ದೊಡ್ಡದು. ಇನ್ನೂ ಬಹಳ ದಿನ ನಡೆಯಲ್ಲ ಎಂದರು.

ದೇವೇಗೌಡ- ಕುಮಾರಸ್ವಾಮಿ ಇಬ್ರೂ ಸೇರಿ ಸಿದ್ರಾಮಯ್ಯರನ್ನ ಸಿಎಂ ಮಾಡೋದು ಸಾಧ್ಯವೇ ಇಲ್ಲ. ಇದೇ ಸ್ಥಿತಿ ಹಿಂದೆ ಬಂದಾಗ ಧರ್ಮಸಿಂಗ್ ರನ್ನು ದೇವೇಗೌಡರು ಸಿಎಂ ಮಾಡಿದ್ರು. ಈಗ ಸಿದ್ದರಾಮಯ್ಯನವರು ಮುಂದಿನ ನಾಲ್ಕು ವರ್ಷದವರೆಗೆ ಸಿಎಂ ಕನಸ್ಸು ಬಿಡಬೇಕು ಎಂದರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಖರ್ಗೆ ವಿರುದ್ಧ ಕೇಸ್ ಹಾಕ್ತಾರಾ ಶೋಭಾ ಕರಂದ್ಲಾಜೆ?