ಸಿಎಂ ಕುಮಾರಸ್ವಾಮಿ ತಾವು ಹೇಳಬೇಕಾದ್ದನ್ನು ವಿಶ್ವನಾಥ್ ಮೂಲಕ ಹೇಳಿಸಿದ್ದಾರೆ- ಬಿಎಸ್ ವೈ ಆರೋಪ

ಸೋಮವಾರ, 13 ಮೇ 2019 (11:33 IST)
ಕಲಬುರಗಿ : ಸಿಎಂ ಕುಮಾರಸ್ವಾಮಿ ತಾವು ಹೇಳಬೇಕು ಅಂತ ಅಂದುಕೊಂಡಿದ್ದನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಮೂಲಕ ಹೇಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರ ಕುರಿತು ನೀಡಿರುವ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ ಅವರು ಈ ರೀತಿಯಾಗಿ ಹೇಳಿದ್ದಾರೆ. 2 ಪಕ್ಷಗಳ ಕಚ್ಚಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಚುನಾವಣೆ ಫಲಿತಾಂಶದ ಬಳಿಕ ಸರ್ಕಾರಕ್ಕೆ ಧಕ್ಕೆಯಾಗುವ  ಸಾಧ್ಯತೆ ಇದೆ. ಅವರಿಗೆ ತಾಕತ್ತಿದ್ದರೆ ಅವರ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ. ಅವರ ಕಚ್ಚಾಟ ಎಲ್ಲಿ ಹೋಗಿ ಮುಟ್ಟುತ್ತೋ ಕಾದು ನೋಡೋಣ. ವಿರೋಧ ಪಕ್ಷವಾಗಿ ನಮ್ಮ ಕೆಲಸವನ್ನ ನಾವು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.


ನಾನು ಎಂದೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಲ್ಲ. ನಾನೇ ಸರ್ಕಾರ ಮಾಡ್ತೀನಿ. ಸಿಎಂ ಆಗ್ತೀನಿ ಅಂತೆಲ್ಲಾ ಹೇಳಿಲ್ಲ. ನಾನು ಮುಂದೆಯೂ ಸಹ ಹಾಗೇ ಹೇಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿದ್ದರಾಮಯ್ಯರನ್ನು ಜೆಡಿಎಸ್ ನಾಯಕರು ಟಾರ್ಗೆಟ್ ಮಾಡುತ್ತಿದ್ದಾರೆ- ಕೈ ನಾಯಕರ ಆಕ್ರೋಶ