Publish Date: Thu, 09 May 2019 (12:49 IST)
Updated Date: Thu, 09 May 2019 (12:50 IST)
ಹಾವೇರಿ : ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬ ಶ್ರೀಗಳ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಜೆಡಿಎಸ್ ರಾಜಾಧ್ಯಕ್ಷ ಹೆಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ಹಾವೇರಿಯಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಾಧಿಪತಿಗಳು ಸಹ ಮತದಾರರೇ, ಮತದಾರರಾಗಿ ಹೇಳೋದ್ರಲ್ಲಿ ತಪ್ಪಿಲ್ಲ. ಯಾವುದೇ ಪಕ್ಷದ ಪರ ವೋಟು ಹಾಕಿ ಅಂತಾ ಹೇಳೋದು ತಪ್ಪು. ಯಾರೋ ಒಬ್ಬರು ಸಿಎಂ ಆಗಲಿ ಎಂದು ಹೇಳೋದ್ರಲ್ಲಿ ತಪ್ಪಿಲ್ಲ ಎಂದು ಶ್ರೀಗಳ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಸಿ.ಎಸ್. ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ ಎಂಬ ಶ್ರೀರಾಮುಲು ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು,ಯಾರ ಸಾವಿಗೂ ಯಾರು ಕಾರಣರಲ್ಲ. ಇದು ಬಾಲಿಶ ಹೇಳಿಕೆ. ಈ ಬಗ್ಗೆ ಮಾತನಾಡಲೂ ಬಾರದು , ಅದನ್ನ ನಂಬಲೂಬಾರದು ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.