Select Your Language

Notifications

webdunia
webdunia
webdunia
Sunday, 13 April 2025
webdunia

ಬಿಜೆಪಿಯದ್ದು ಪೇಶೆಂಟ್ ಇಲ್ಲದ ಕಮಲ ನರ್ಸಿಂಗ್ ಹೋಂ

ಬಿಜೆಪಿ
ಬೆಂಗಳೂರು , ಸೋಮವಾರ, 13 ಮೇ 2019 (13:41 IST)
ಬಿಜೆಪಿಯವರು ಡೋಂಗಿ ರಾಜಕಾರಣ ಮಾಡ್ತಿದ್ದಾರೆ. ಹೊಸದಾಗಿ ಕಮಲ ನರ್ಸಿಂಗ್ ಬೇರೆ ಮಾಡಿದ್ದಾರೆ. ಆದರೂ ನರ್ಸಿಂಗ್ ಹೋಂಗೆ ಪೇಶೆಂಟ್ ಹೋಗ್ತಿಲ್ಲ ಅಂತ ಜೆಡಿಎಸ್ ವ್ಯಂಗ್ಯವಾಡಿದೆ.

ವಿಧಾನ ಪರಿಷತ್ ಸದಸ್ಯ ಸರವಣ ಹೇಳಿಕೆ ನೀಡಿದ್ದು, ಬಿಜೆಪಿ ಆಪರೇಷನ್ ಕಮಲಕ್ಕೆ ಲೇವಡಿ ಮಾಡಿದ್ದಾರೆ.

ನಮ್ಮ ಪಕ್ಷದಲ್ಲಿ ಸಣ್ಣ ಪುಟ್ಟ ಸಮಸ್ಯೆಯಿದೆ ನಿಜ. ವಿಶ್ವನಾಥ್, ಸಿದ್ದರಾಮಯ್ಯ ಮಾತು ನಾನು ಕೇಳಿದ್ದೇನೆ. ಇದನ್ನ ನಮ್ಮ ಹಿರಿಯರು ಕೂತು ಬಗೆಹರಿಸುತ್ತಾರೆ. ಇದಕ್ಕೆ ಬಿಜೆಪಿಯವರು ಗೆದ್ದು ಬೀಗ ಬೇಕಿಲ್ಲ ಎಂದು ಟಾಂಗ್ ನೀಡಿದ್ರು.

webdunia
ಯಡಿಯೂರಪ್ಪ ಜ್ಯೋತಿಷ್ಯ ಕೇಂದ್ರ ನಡೆಸ್ತಿದ್ದಾರೆ. ಅವರ ಜ್ಯೋತಿಷ್ಯ ಕೇಳೋಕೆ ಯಾರು ಹೋಗ್ತಿಲ್ಲ. ಅದಕ್ಕೆ ಹತಾಶ ರಾಗಿ ಇಂತ ಹೇಳಿಕೆ ನೀಡ್ತಿದ್ದಾರೆ. ಗಣೇಶ, ದಸರಾ, ದೀಪಾವಳಿಗೂ ಯಡಿಯೂರಪ್ಪ ಭವಿಷ್ಯ ನುಡಿದಿದ್ದರು. ಹೊಸದಾಗಿಯೇನು ಅವರು ಜ್ಯೋತಿಷ್ಯ ಹೇಳಿಲ್ಲ.

ಬಿಜೆಪಿಯವರು ಡೋಂಗಿ ರಾಜಕಾರಣ ಮಾಡ್ತಿದ್ದಾರೆ. ಹೊಸದಾಗಿ ಕಮಲ ನರ್ಸಿಂಗ್ ಬೇರೆ ಮಾಡಿದ್ದಾರೆ.
ಆದರೂ ನರ್ಸಿಂಗ್ ಹೋಂಗೆ ಪೇಶೆಂಟ್ ಹೋಗ್ತಿಲ್ಲ. ಕಮಲ ಆಪರೇಷನ್ ಕೂಡ ನಡೆಯಲ್ಲ.

ಅವರು ನರ್ಸಿಂಗ್ ಹೋಂ ಮಾಡಿ ಕುಳಿತಿದ್ದಾರೆ. 20 ಪೇಶೆಂಟ್ ಬರ್ತಾರೆ ಅಂತ ಕಾಯ್ತಿದ್ದಾರೆ. ಆದ್ರೆ ಜಾಧವ್ ಅಂತ ಪೇಶೆಂಟ್ ಮಾತ್ರ ಹೋಗಿದ್ದಾರೆ. ಬೇರೆ ಇನ್ಯಾವ ಪೇಶೆಂಟ್ ಕೂಡ ಹೋಗಲ್ಲ ಅಂತ ಬಿಜೆಪಿ ವಿರುದ್ಧ ಶರವಣ ವ್ಯಂಗ್ಯವಾಡಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಮೈತ್ರಿ ಸರಕಾರ ಪತನ?: ಕಾಂಗ್ರೆಸ್ ನವರು ಅವರ ದಾರಿ ನೋಡಿಕೊಳ್ಳಲಿ ಎಂದ ಜೆಡಿಎಸ್