Select Your Language

Notifications

webdunia
webdunia
webdunia
webdunia

ಬೈ ಎಲೆಕ್ಷನ್ ಗೆದ್ರೆ ಸರಕಾರ ನಮ್ಮದೇ ಎಂದ ಯಡಿಯೂರಪ್ಪ

ಬೈ ಎಲೆಕ್ಷನ್ ಗೆದ್ರೆ ಸರಕಾರ ನಮ್ಮದೇ ಎಂದ ಯಡಿಯೂರಪ್ಪ
ಹುಬ್ಬಳ್ಳಿ , ಭಾನುವಾರ, 12 ಮೇ 2019 (14:36 IST)
ಕುಂದಗೋಳ ಹಾಗೂ ಚಿಂಚೋಳಿ ಬೈ ಎಲೆಕ್ಷನ್ ಗೆದ್ರೆ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಹೀಗಂತ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದು, 25 ಸಾವಿರ ಅಂತರದಿಂದ ಎಸ್. ಐ. ಚಿಕ್ಕನಗೌಡ್ರು ಕುಂದಗೋಳದಲ್ಲಿ ಗೆಲ್ತಾರೆ. ಸುಲಭವಾಗಿ ಹೆಚ್ಚಿನ ಅಂತರದಿಂದ ಗೆಲ್ತಾರೆ ಎನ್ನುವ ವಿಶ್ವಾಸವಿದೆ ಎಂದ್ರು.
ಇಂದು ಕುಂದಗೋಳ ಕ್ಷೇತ್ರದಲ್ಲಿ ಪ್ರಚಾರ ಮುಗಿಸಿ,‌ ಚಿಂಚೋಳಿ ಕ್ಷೇತ್ರಕ್ಕೆ ಹೋಗಿ 16-17 ರಂದು ಮತ್ತೇ ಬರುತ್ತೇನೆ ಎಂದರು.

ಡಿ. ಕೆ. ಶಿವಕುಮಾರ್ ಅವರು ಎಷ್ಟೇ ಆಮಿಷ ಒಡ್ಡಿದ್ರು ನಮ್ಮ ಪಕ್ಷದವರು ಯಾರು ಹೋಗಲ್ಲಾ. ಡಿ. ಕೆ. ಶಿವಕುಮಾರ್ ಸೇರಿದಂತೆ ಎಷ್ಟೇ ಹಿರಿಯ ನಾಯಕರ ಪ್ರಯತ್ನ ಮಾಡಿದ್ರು ಬಿಜೆಪಿ ಬಿಟ್ಟು ಯಾರು ಹೋಗಲ್ಲ. ಕುಂದಗೋಳ ಹಾಗೂ ಚಿಂಚೋಳಿ ಎರಡು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ.

ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಪ್ರಶ್ನೆಯೇ ಇಲ್ಲಾ. ಅವರೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಅವರು ಹೊಡೆದಾಡಿಕೊಂಡರೆ ಅದಕ್ಕೆ ನಾವು ಹೊಣೆಯಲ್ಲ ಎಂದರು.  




Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ರೆಸಾರ್ಟ್ ವಾಸ್ತವ್ಯ; ಸಚಿವ ಡಿ.ಕೆ.ಶಿವಕುಮಾರ ಹೀಗ್ಯಾಕೆ ಹೇಳಿದ್ರು?