Publish Date: Sun, 12 May 2019 (13:30 IST)
Updated Date: Sun, 12 May 2019 (13:32 IST)
ರಾಜ್ಯದ ಎರಡು ಉಪ ಚುನಾವಣೆಗಳಲ್ಲಿ ನಮ್ಮ ಗೆಲುವು ಆಗುತ್ತದೆ. 23 ರ ಲೋಕಸಭೆ ಚುನಾವಣೆ ಫಲಿತಾಂಶದ ನಂತ್ರ ಸಮ್ಮಿಶ್ರ ಸರ್ಕಾರ ತಾನಾಗಿಯೇ ಬೀಳುತ್ತದೆ. ಹೀಗಂತ ಮಾಜಿ ಸಿಎಂ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದು, ಡಿ.ಕೆ.ಶಿವಕುಮಾರ ಪೇಪರ್ ಟೈಗರ್,
ಸುಮ್ಮನೆ ಅವರನ್ನ ಹಿರೋ ಮಾಡಲಾಗುತ್ತಿದೆ ಎಂದು ವ್ಯಂಗ್ಯವಾಡಿದ್ರು. ಮಾಧ್ಯಮದವರೇ ಅವರನ್ನ ಹಿರೋ ಮಾಡುತ್ತಿದ್ದಾರೆ.
ಕನಕಪುರದ ಅಕ್ಕಪಕ್ಕದಲ್ಲಿ ಅವರಿಗೆ ಗೆಲ್ಲಿಸಲು ಆಗಲಿಲ್ಲ. ಇನ್ನೂ ಇಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂದರು.
ಅವರ ಯಾವುದೇ ತಂತ್ರಗಾರಿಗೆ ಇಲ್ಲಿ ಕುಂದಗೋಳದಲ್ಲಿ ನಡೆಯುವದಿಲ್ಲ ಅಂತ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದಾರೆ.