Select Your Language

Notifications

webdunia
webdunia
webdunia
webdunia

ಬೈ ಎಲೆಕ್ಷನ್ ಅಖಾಡಕ್ಕೆ ಇಳಿದ ವೇಣುಗೋಪಾಲ್

ಬೈ ಎಲೆಕ್ಷನ್ ಅಖಾಡಕ್ಕೆ ಇಳಿದ ವೇಣುಗೋಪಾಲ್
ಬೆಂಗಳೂರು , ಶನಿವಾರ, 11 ಮೇ 2019 (19:25 IST)
ರಾಜ್ಯದ ಎರಡು ಬೈ ಎಲೆಕ್ಷನ್ ಕ್ಷೇತ್ರಗಳನ್ನು ಕೈ-ಕಮಲ ಪಡೆ ಸವಾಲಾಗಿ ಸ್ವೀಕರಿಸಿವೆ. ಹೀಗಾಗಿ ಕಾಂಗ್ರೆಸ್ ಉಸ್ತುವಾರಿ ನೇರವಾಗಿ ಅಖಾಡಕ್ಕೆ ಧುಮುಕಿದ್ದಾರೆ.

ಕುಂದಗೋಳ, ಚಿಂಚೋಳಿ ಬೈ ಎಲೆಕ್ಷನ್ ಪ್ರಚಾರದಲ್ಲಿ ವೇಣುಗೋಪಾಲ್ ಭಾಗಿಯಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕೆ.ಸಿ.ವೇಣುಗೋಪಾಲ್ , ಕುಂದಗೋಳದಲ್ಲಿ ಪ್ರಚಾರ ನಡೆಸಲಿದ್ದಾರೆ. ಆ ಬಳಿಕ ಚಿಂಚೋಳಿಯಲ್ಲಿ ಕ್ಯಾಂಪೇನ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಚಿಂಚೋಳಿ ಪ್ರಚಾರದ ಬಳಿಕ ಕಲಬುರಗಿಯಲ್ಲಿ ಸಭೆ ನಡೆಸುವರು. ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ವೇಣುಗೋಪಾಲ್ ಪ್ರಮುಖ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ 23 ರ ಫಲಿತಾಂಶದ ನಂತರದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಲಿದೆ. ಅಷ್ಟೇ ಅಲ್ಲ ರಮೇಶ್ ಜಾರಕಿಹೊಳಿ, ಅತೃಪ್ತರ ನಡೆಯ ಬಗ್ಗೆ ಚರ್ಚೆ ನಡೆಯಲಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಗ್ರಾಮೀಣ ಲೋಕಸಭಾ ಚುನಾವಣೆ 2019|Bangalore Rural Lok Sabha 2019 seat