Select Your Language

Notifications

webdunia
webdunia
webdunia
webdunia

ಮಹಾರಾಷ್ಟ್ರಕ್ಕೆ ಮಣಿದ ಸರಕಾರ; ಕೋಯ್ನಾ ನೀರು ಬರುತ್ತೆ ಎಂದ ಡಿಕೆಶಿ

ಮಹಾರಾಷ್ಟ್ರಕ್ಕೆ ಮಣಿದ ಸರಕಾರ; ಕೋಯ್ನಾ ನೀರು ಬರುತ್ತೆ ಎಂದ ಡಿಕೆಶಿ
ಬೆಂಗಳೂರು , ಭಾನುವಾರ, 12 ಮೇ 2019 (14:11 IST)
ಮಹಾರಾಷ್ಟ್ರದ  ಒತ್ತಡಕ್ಕೆ ಕೊನೆಗೂ ರಾಜ್ಯ ಸರಕಾರ ಮಣಿದಿದೆ.

ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಹರಿಸುವ ಸಂಬಂಧ ಮಹಾರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ. ಇಂದು ಸಂಜೆಯೊಳಗಾಗಿ ಕಡತಕ್ಕೆ ಸಹಿ ಮಾಡಿ ಕಳುಹಿಸುವುದಾಗಿ ಪ್ರಕಟಿಸಿದ್ದಾರೆ  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್.

ಡಿ.ಕೆ.ಶಿವಕುಮಾರ್ ಈ ಕುರಿತು ಮಾತನಾಡಿದ್ದು, ನಮಗೆ ರಾಜ್ಯದ ಜನರ ಹಿತ ಮುಖ್ಯ. ನಮ್ಮ ಉತ್ತರ ಕರ್ನಾಟಕದ ಜನರಿಗೆ ತುರ್ತಾಗಿ ನೀರು ಕೊಡಲೇಬೇಕು. ಮೊದಲೆಲ್ಲಾ ಕರ್ನಾಟಕದಿಂದ ಹಣ ಪಡೆದು ನೀರು ಬಿಡುಗಡೆ ಮಾಡುತ್ತಿದ್ದ ಮಹಾರಾಷ್ಟ್ರ ಸರ್ಕಾರ ಈ ಬಾರಿ ವರಸೆ ಬದಲಿಸಿದೆ.

ನೀರಿಗೆ ಬದಲಾಗಿ ಕರ್ನಾಟಕದಿಂದಲೂ ನೀರು ಕೊಡಲೇಬೇಕು. ಈ ಸಂಬಂಧ ಲಿಖಿತ ಒಪ್ಪಂದ ಮಾಡಿಕೊಳ್ಳುವಂತೆ ಪಟ್ಟು ಹಿಡಿದಿದೆ. ಮೊದಲು ಮಾನವೀಯತೆಯ ದೃಷ್ಟಿಯಿಂದ ನೀರು ಬಿಡಲು ಒಪ್ಪಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಇದ್ದಕ್ಕಿದ್ದಂತೆ ತಮ್ಮ ಮಾತಿಗೆ ತಪ್ಪಿದ್ದಾರೆ. ಆದರೂ ನಮ್ಮ ರಾಜ್ಯದ ಜನರಿಗಾಗಿ ಅವರ ಒತ್ತಡಕ್ಜೆ ನಾವು ಮಣಿದಿದ್ದೇವೆ ಎಂದರು.



Share this Story:

Follow Webdunia kannada

ಮುಂದಿನ ಸುದ್ದಿ

ಕಾರಜೋಳಗೆ ಖಡಕ್ ವಾರ್ನಿಂಗ್ ನೀಡಿದ ಸಚಿವ