Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ 23 ರ ನಂತರ ಸಿಎಂ!

ಯಡಿಯೂರಪ್ಪ 23 ರ ನಂತರ ಸಿಎಂ!
ಹುಬ್ಬಳ್ಳಿ , ಭಾನುವಾರ, 12 ಮೇ 2019 (13:42 IST)
ಕುಂದಗೋಳ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸುತ್ತದೆ. ಐದು ವರ್ಷ ದೇಶದಲ್ಲಿ ಮೋದಿ ಮಾಡಿದ ಸಾಧನೆ, ದೇಶದ ರಕ್ಷಣೆ, ಯಡಿಯೂರಪ್ಪ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳು ಕೈ ಹಿಡಿಯಲಿವೆ ಅಂತ ಮಾಜಿ ಸಚಿವ ಹೇಳಿದ್ದಾರೆ.

ಮತ್ತೊಮ್ಮೆ ಬಿಜೆಪಿಯನ್ನ ಅಧಿಕಾರಕ್ಕೆ ತರಲು ಕುಂದಗೋಳ- ಚಿಂಚೋಳಿ ಎರಡು ಸ್ಥಾನವನ್ನು ಜನರು ಬಿಜೆಪಿಗೆ ಗೆಲ್ಲಿಸುತ್ತಾರೆ. ಕಳೆದ ಆರು ವರ್ಷದಲ್ಲಿ ರಾಜ್ಯವನ್ನು ಕೊಳ್ಳೆ ಹೊಡೆದವರು ಹಣ ಹಂಚಿಕೆ ಮಾಡುತ್ತಿದ್ದಾರೆ. ರಾಜಕೀಯ ಪಕ್ಷವಾಗಿ ಚುನಾವಣಾ ವ್ಯವಸ್ಥೆಯನ್ನ ಹದಗೆಡಿಸುತ್ತಿದ್ದಾರೆ. ಹಣ ಹಂಚಿಕೆ ಮಾಡಿ, ಸರಾಯಿ ಹಂಚಿಕೆ ಮಾಡಿ ಗೆಲ್ಲಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ದೂರಿದ್ದಾರೆ.

ರಾಜ್ಯದಲ್ಲಿ ಭೀಕರ ಬರ, ಕುಡಿಯುವ ನೀರಿನ‌ ಸಮಸ್ಯೆ ಇರುವಾಗ ಸಿಎಂ ರೆಸಾರ್ಟ್ ಸೇರಿದ್ದಾರೆ. 23 ನಂತರ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗ್ತಾರೆ. ಕಾಂಗ್ರೆಸ್ ದಿನದಿಂದ ದಿನಕ್ಕೆ ಅಸ್ತಿತ್ವಕ್ಕೆ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಶಾಸಕರಿಗೆ ಭವಿಷ್ಯದ ಪ್ರಶ್ನೆ ಎದುರಾಗಿದೆ. ಹಾಗಾಗಿ ಅವರೆಲ್ಲ ಬಿಜೆಪಿಗೆ ಬರ್ತಾರೆ ಎಂದ್ರು.

ಜೆಡಿಎಸ್- ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಎದುರಾಗಿದೆ, ಅವರೆಲ್ಲ ಭವಿಷ್ಯ ರೂಪಿಸಿಕೊಳ್ಳಲು ಬಿಜೆಪಿಗೆ ಬರುತ್ತಿದ್ದಾರೆ ಅಂತ ಕಾರಜೋಳ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಸಿಎಂ ಆಗಲೇಬೇಕು ಎಂದೋರಾರು?