Publish Date: Sun, 12 May 2019 (12:48 IST)
Updated Date: Sun, 12 May 2019 (12:50 IST)
ಸಿಎಂ ರೆಸಾರ್ಟ್ ವಾಸ್ತವ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಮೂರನೇ ದಿನಕ್ಕೆ ಕಾಲಿಟ್ಟಿದೆ ಸಿಎಂ ಕೊಡಗು ರೆಸಾರ್ಟ್ ವಾಸ್ತವ್ಯ. ಇಂದಿಗೆ ಮುಕ್ತಾಯವಾಗಲಿದೆ ಸಿಎಂ ರೆಸಾರ್ಟ್ ವಾಸ್ತವ್ಯ. 3 ದಿನಗಳಿಂದ ಮಾಧ್ಯಮಗಳಿಗೆ ಕಾಣಿಸಿಕೊಳ್ಳದ ಸಿಎಂ ಕಂಪ್ಲೀಟ್ ರೆಸ್ಟ್ ಮೂಡ್‌ನಲ್ಲಿದ್ದಾರೆ.
ಸಿಎಂ ಕುಮಾರಸ್ವಾಮಿ ಜೊತೆ ರೆಸ್ಟ್‌ನಲ್ಲಿರುವ ಪತ್ನಿ ಅನಿತಾ, ಪುತ್ರ ನಿಖಿಲ್ ಇದ್ದಾರೆ.
ಸಿಎಂ ಗೆ ಸಾಥ್ ನೀಡಿದ್ದರು ಸಚಿವರಾದ ಸಾ ರಾ ಮಹೇಶ್, ಪುಟ್ಟರಾಜು. ಮೊನ್ನೆ ಸಿಎಂ ಜೊತೆಯೇ ಬಂದಿದ್ದರು ಸಾ. ರಾ. ಮಹೇಶ್. ನಿನ್ನೆ ಸಂಜೆ ರೆಸಾರ್ಟ್‌ಗೆ ಬಂದು ಹೋಗಿದ್ದಾರೆ ಸಚಿವ ಪುಟ್ಟರಾಜು. ಇಂದು ಚೆಕ್ ಔಟ್ ಆಗಲಿದ್ದಾರೆ ಸಿಎಂ. ಮಡಿಕೇರಿ ಹೊರವಲಯದಲ್ಲಿರುವ ಇಬ್ಬನಿ ರೆಸಾರ್ಟ್ ನಲ್ಲಿ ಸಿಎಂ ತಂಗಿದ್ದರು.
ರೆಸಾರ್ಟ್‌ನಿಂದ ಬೆಂಗಳೂರು ಕಡೆಗೆ ಪ್ರಯಾಣ ಬೆಳಸಲಿರೋ ಸಿಎಂ, ಇದರ ನಡುವೆ ಮಂಡ್ಯದ ಬೀಗರ ಔತಣ ಕೂಟದಲ್ಲಿ ಭಾಗಿಯಾಗಲಿದ್ದಾರೆ.