ಮೈತ್ರಿ ಸರಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾರೆ.  ಹೀಗಾಗಿ ಸಿಎಂ ಕುರ್ಚಿ ಕುರಿತು ಚರ್ಚೆ ಮಾಡೋದು ಸರಿಯಲ್ಲ. ಅದು ಅಪ್ರಸ್ತುತ ಹಾಗೇ ಅದಕ್ಕೆ ಅರ್ಥವೇ ಇಲ್ಲ. ಹೀಗಂತ ಡಿಸಿಎಂ ಹೇಳಿದ್ದಾರೆ.
									
										
								
																	ತುಮಕೂರಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾತನಾಡಿದ್ದು, ಸರಕಾರ ರಚಿಸೋದಾಗಿ ಹೇಳುವ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ. ಅವರು ಏನಾದರೂ ಹೇಳಿಕೊಳ್ಳಲಿ. ಮೈತ್ರಿ ಸರಕಾರಕ್ಕೆ ಯಾವುದೇ ರೀತಿ ಧಕ್ಕೆ ಇಲ್ಲ ಎಂದರು.
									
			
			 
 			
 
 			
			                     
							
							
			        							
								
																	ಚಿಂಚೋಳಿ ವಿಧಾನಸಭೆಯ ಉಪಚುನಾವಣೆಯ ಹೊಣೆಗಾರಿಕೆ ನನ್ನ ಮೇಲೆ ಹೈಕಮಾಂಡ್ ವಹಿಸಿದೆ. ಕುಂದಗೋಳದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಇದ್ದಾರೆ. ಎರಡೂ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ ಎಂದರು.
									
										
								
																	ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಗೆಲ್ಲಲಿದ್ದಾರೆ ಎಂದು ಡಿಸಿಎಂ ಹೇಳಿದ್ರು.