Publish Date: Fri, 10 May 2019 (08:55 IST)
Updated Date: Fri, 10 May 2019 (08:59 IST)
ಹುಬ್ಬಳ್ಳಿ : ಒಂದು ಕಡೆ ಸಿದ್ಧರಾಮಯ್ಯ ಸಿಎಂ ಆಗಬೇಕು ಎಂದು ಕಾಂಗ್ರೆಸ್ ನಾಯಕರು ಹಂಬಲಿಸುತ್ತಿದ್ದರೆ, ಮತ್ತೊಂದು ಕಡೆ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಈ ಜನ್ಮದಲ್ಲಿ ರಾಹುಲ್ ಗಾಂಧಿ ಮದುವೆ ಆಗಲ್ಲ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲ್ಲ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಭಿಕ್ಷುಕನಂತೆ ಕನಸು ಕಾಣುತ್ತಿದ್ದಾರೆ. ಮೂರು ನಾಲ್ಕು ಜನ ನಾಯಕರ ಬಾಯಿಂದ ಸಿದ್ದರಾಮಯ್ಯ ಸಿಎಂ ಆಗಬೇಕೆಂದು ಹೇಳಿಕೆ ಕೊಡಿಸುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡಬಾರದೆಂದು ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಹೇಳಿದ್ರೂ ಕೂಡಾ ಚರ್ಚೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಮಾರಸ್ವಾಮಿ ಸಿಎಂ ಚರ್ಚೆ ಬಗ್ಗೆ ಗರಂ ಆಗಿದ್ದಾರೆ. ನಾಡಿನ ಜನತೆ ತಿರಸ್ಕಾರ ಮಾಡಿದ ಎರಡು ಪಕ್ಷಗಳು ಸೇರಿ ಸರ್ಕಾರ ರಚನೆ ಮಾಡಿವೆ. ಇವರಿಗೆ ರಾಜ್ಯದ ಜನ ಮೆಚ್ಚುತ್ತಿಲ್ಲ. ಇನ್ನು ಒಳ ಒಪ್ಪಂದಕ್ಕೂ ಸಿದ್ದರಾಮಯ್ಯಗೂ ಏನೋ ಸಂಬಂಧವಿದೆ. ದೇವೇಗೌಡ್ರು-ಕುಮಾರಸ್ವಾಮಿ ಮೇಲೆ ಸಿದ್ದರಾಮಯ್ಯಗೆ ಈಗಲೂ ದ್ವೇಷವಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.