Publish Date: Sat, 11 May 2019 (12:32 IST)
Updated Date: Sat, 11 May 2019 (12:39 IST)
ಎಸ್.ಸಿ., ಎಸ್.ಟಿ ವರ್ಗಗಳಿಗೆ ಬಿಜೆಪಿ ಏನು ಮಾಡಿದೆ ಅಂತ ಹೇಳಲಿ. ಈ ಕುರಿತು ಬಹಿರಂಗ ಚರ್ಚೆಗೆ ಸಿದ್ಧ ಅಂತ ಮಾಜಿ ಸಿಎಂಗೆ, ಮಾಜಿ ಸಿಎಂ ಸವಾಲು ಹಾಕಿದ್ದಾರೆ.
ಬಿಜೆಪಿ ಎಸ್.ಸಿ., ಎಸ್.ಟಿ.ಗೆ ಏನು ಮಾಡಿದೆ ಎಂಬುದನ್ನು ಬಿ.ಎಸ್.ಯಡಿಯೂರಪ್ಪ ಹೇಳಬೇಕು. ಈ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಕೋಲಿ ಸಮಾಜವನ್ನು ಎಸ್.ಟಿ.ಗೆ ಶಿಫಾರಸ್ಸು ಮಾಡಿದ್ದು ನಾವು. ಆದ್ರೆ ನರೇಂದ್ರ ಮೋದಿ ಯಾಕೆ ಶಿಫಾರಸ್ಸು ಅಂಗೀಕರಿಸಿ ಎಸ್.ಟಿ. ಮಾಡಲಿಲ್ಲವೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಎಸ್.ಟಿ. ಗೆ ಸೇರ್ಪಡೆ ಮಾಡಿಸೋದಾಗಿ ಬಾಬುರಾವ್ ಚಿಂಚನಸೂರ ಹೇಳ್ತಾರೆ. ಚಿಂಚನಸೂರರನ್ನು ಸಚಿವರನ್ನಾಗಿಸಿದ್ದು ಕಾಂಗ್ರೆಸ್. ಆದ್ರೆ ಬಿಜೆಪಿ ಅವರು ಚಿಂಚನಸೂರಗೆ ತಮಟೆ ಹೊಡೆಯೋ ಕೆಲಸ ಕೊಟ್ಟಿದ್ದಾರೆ. ಗೊಂಡ ಸಮಾಜವನ್ನು ಎಸ್.ಟಿ.ಗೆ ಶಿಫಾರಸ್ಸು ಮಾಡಿದವರು ನಾವು. ಆದ್ರೆ ನರೇಂದ್ರ ಮೋದಿ ಅದನ್ನು ಪುರಸ್ಕರಿಸಿಲ್ಲ. ಹೀಗಿರಬೇಕಾದ್ರೆ ಬಿಜೆಪಿಯನ್ನೇಕೆ ಬೆಂಬಲಿಸುತ್ತೀರಿ ಎಂದು ಕೇಳಿದ್ರು.
ಏನೂ ಮಾಡದೇ ಮತ ಕೇಳಿಕೊಂಡು ಬರಲು ನಾಚಿಕೆಯಾಗಬೇಕು ಬಿಜೆಪಿಯವರಿಗೆ ಎಂದು ಸಿದ್ದರಾಮಯ್ಯ, ಕಲಬುರಗಿ ಜಿಲ್ಲೆಯ ಚಿಂಚೋಳಿಯ ಕೊಂಚವರಂ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ದೂರಿದ್ರು.