Select Your Language

Notifications

webdunia
webdunia
webdunia
webdunia

ಡಾ.ಅವಿನಾಶ್ ಜಾಧವ್ ಗೆಲ್ಲಿಸಲು ಬಿಜೆಪಿಯಿಂದ ‘ಎಬಿಸಿಡಿ’ ಪ್ಲಾನ್ ಅನುಷ್ಠಾನ

ಡಾ.ಅವಿನಾಶ್ ಜಾಧವ್ ಗೆಲ್ಲಿಸಲು ಬಿಜೆಪಿಯಿಂದ ‘ಎಬಿಸಿಡಿ’ ಪ್ಲಾನ್ ಅನುಷ್ಠಾನ
ಬೆಂಗಳೂರು , ಶನಿವಾರ, 11 ಮೇ 2019 (11:35 IST)
ಬೆಂಗಳೂರು : ಮೇ 19ರಂದು ನಡೆಯಲಿರುವ ಚಿಂಚೋಳಿ ಕ್ಷೇತ್ರದ ಉಪಚುನಾವಣೆಯ ಹಿನ್ನಲೆ ಡಾ.ಅವಿನಾಶ್ ಜಾಧವ್ ಅವರನ್ನು ಗೆಲ್ಲಿಸಲು ಬಿಜೆಪಿ ‘ಎಬಿಸಿಡಿ’ ಎಂಬ  ಮಾಸ್ಟರ್ ಪ್ಲಾನ್ ಮಾಡಿದೆ.



ಹೌದು. ಡಾ.ಅವಿನಾಶ್ ಜಾಧವ್ ಅವರನ್ನು ಗೆಲ್ಲಿಸಲು ರಾಜ್ಯ ಬಿಜೆಪಿ ಪ್ರಚಾರ ಮಾಡದೆ ಸೈಲೆಂಟಾಗಿ ‘ಎಬಿಸಿಡಿ’ ಪ್ಲಾನ್ ಅನುಷ್ಠಾನ ಮಾಡುತ್ತಿದೆ. ಅದರಂತೆ ಬಿಜೆಪಿ ‘ಎಬಿಸಿಡಿ’ ಎಂದು ಮತದಾರರ ಪಟ್ಟಿ ಸಿದ್ಧಪಡಿಸಿದ್ದು, ಎ ಅಂದ್ರೆ ಬಿಜೆಪಿ ಪರವಾಗಿರುವ ಮತದಾರರು, ಬಿ ಅಂದ್ರೆ ಪಕ್ಷಗಳ ಪರವಾಗಿ ಇರದೆ ತಟಸ್ಥರಾಗಿರುವವರು, ಸಿ ಅಂದ್ರೆ ನಾಯಕರ ಮಾತು ಕೇಳಿ ವೋಟ್ ಹಾಕುವವರು, ಡಿ ಅಂದ್ರೆ ಕಾಂಗ್ರೆಸ್ ಪರವಾಗಿರುವ ಮತದಾರರು ಎಂದು.

 

ಪ್ರಮುಖರಿಂದ ಈ ಮಾಹಿತಿ ಕಲೆಹಾಕಿರುವ ರಾಜ್ಯ ಬಿಜೆಪಿ ‘ಬಿಸಿಡಿ’ ಗ್ರೂಪ್ ನಲ್ಲಿರುವ ಮತದಾರರನ್ನ ಸೆಳೆಯಲು ಪ್ಲಾನ್ ಮಾಡಿದೆ. ಸಮುದಾಯ,ಸ್ಥಳೀಯ ಮುಖಂಡರಿಂದ ಮತದಾರರನ್ನ ಓಲೈಕೆ ಮಾಡುವ ಪ್ಲಾನ್ ಮಾಡುತ್ತಿದ್ದು, ಬೂತ್ ಮಟ್ಟದಲ್ಲಿ ಮತದಾರರನ್ನ ಸೆಳೆಯುತ್ತಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿಗೆ ಕರೆಂಟ್ ಶಾಕ್ ನೀಡಿದ ಬೆಸ್ಕಾಂ