Publish Date: Mon, 25 Dec 2023 (14:21 IST)
Updated Date: Mon, 25 Dec 2023 (14:30 IST)
ಕಸದ ಗಾಡಿಯಲ್ಲಿ ಬಂದು ಮನೆ ಗೇಟ್ ಮುಂದೆ ಬಿಬಿಎಂಪಿ ಸಿಬ್ಬಂದಿ ಕಸ ಹಾಕಿದ್ದಾರೆ.ಇನ್ನೂ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ತಾನೇ ಕಸ ಸುರಿದ ಬಿಬಿಎಂಪಿ ಸಿಬ್ಬಂದಿಯಿಂದ ಮಹಿಳೆಗೆ ನಿಂದನೆ ಆರೋಪ ಕೇಳಿಬಂದಿದೆ.ಎವಿಡೆನ್ಸ್ ಸಮೇತ ಕ್ರಮಕ್ಕೆ ಮಹಿಳೆ ಆಗ್ರಹಿಸಿದ್ದಾಳೆ.ಎಕ್ಸ್ ನಲ್ಲಿ ಟ್ವೀಟ್ ಮಾಡಿ ಬಿಬಿಎಂಪಿ ಮತ್ತು ಬೆಂಗಳೂರು ಪೊಲೀಸರನ್ನ ಮಹಿಳೆ ಟ್ಯಾಗ್ ಮಾಡಿದ್ದಾಳೆ.ಮಹಿಳೆಯ ಟ್ವೀಟ್ ಗಮನಿಸಿ ಬೆಂಗಳೂರು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
Akanksha Hajela ಎಂಬ ಅಕೌಂಟ್ನಿಂದ ಟ್ವೀಟ್ ಮಾಡಲಾಗಿದೆ.ಮುರುಗೇಶ್ ಪಾಳ್ಯದಲ್ಲಿ ಘಟನೆ ನಡೆದಿದೆ.ಸ್ವತಃ ಬಿಬಿಎಂಪಿ ಸಿಬ್ಬಂದಿಯೇ ಮನೆ ಮುಂದೆ ಕಸ ಸುರಿಯುತ್ತಿರುವ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ.ನಿನ್ನೆ ಬೆಳಗ್ಗೆ 10 ಗಂಟೆಗೆ ಘಟನೆ ನಡೆದಿದೆ.