Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಒಂದು ವರ್ಗದ ಮುಖ್ಯಮಂತ್ರಿ ಅಲ್ಲ

ಸಿದ್ದರಾಮಯ್ಯ ಒಂದು ವರ್ಗದ ಮುಖ್ಯಮಂತ್ರಿ ಅಲ್ಲ
bangalore , ಶನಿವಾರ, 23 ಡಿಸೆಂಬರ್ 2023 (18:42 IST)
ರಾಜ್ಯ ಸರ್ಕಾರ ಹಿಜಾಬ್ ವಾಪಸ್ ಪಡೆದರೆ ರಾಜ್ಯದಲ್ಲಿ ಕೋಮು ಗಲಭೆಗಳು ಆಗುತ್ತವೆ ಅಂತಾ ಮಾಜಿ ಸಚಿವ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.. ದಾವಣಗೆರೆಯಲ್ಲಿ ಮಾತನಾಡಿದ ಅವರು, ಆ ರೀತಿ ಕೋಮುಗಲಭೆಗಳು ಆದರೆ ಆದಕ್ಕೆ ರಾಜ್ಯ ಸರ್ಕಾರ ನೇರ ಕಾರಣವಾಗುತ್ತೆ.
 
ಕರ್ನಾಟಕದಲ್ಲಿ ತುಘಲಕ್, ಟಿಪ್ಪು ಸರ್ಕಾರ ಇದೆ. ಅನುಭವಿ ಸಿದ್ದರಾಮಯ್ಯ ಅವರು ಹಿಜಾಬ್ ಸರ್ಕಾರಿ ಆದೇಶ ಹಿಂಪಡೆಯುತ್ತೇನೆ ಎಂದಿದ್ದಾರೆ. ಒಂದು ವರ್ಗ ಓಲೈಸಲು ಈ ತರಾ ಮಾಡುತಿದ್ದಾರೆ. ಹಿಜಾಬ್ ಧರಿಸಲು ಅವರಿಗೆ ಅವಕಾಶ ಕೊಟ್ಟರೆ ನಮಗೂ ಕೇಸರಿ ಶಾಲು ಧರಿಸಲು ಅವಕಾಶ ಕೊಡಿ, ನಮ್ಮ ಹುಡುಗರಿಗೆ ಕೇಸರಿ ಶಾಲು ಧರಿಸಿ ಬರಲು ನಾನೇ ಹೇಳ್ತೀನಿ. ನೀವು ಒಂದು ವರ್ಗದ ಮುಖ್ಯಮಂತ್ರಿ ಅಲ್ಲ. ನೀವು ಹಿಜಾಬ್ ಆದೇಶ ವಾಪಸ್ ಪಡೆದರೆ ನಮ್ಮ ಹುಡುಗ ಹುಡುಗಿಯರು ಕೇಸರಿ ಶಾಲು, ಕೇಸರಿ ಟೋಫಿ ಧರಿಸಿಕೊಂಡು ಬರ್ತಾರೆ ಅಂತಾ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲಾ ಮಕ್ಕಳನ್ನು ರಾಜಕೀಯದಿಂದ ದೂರ ಇಡಿ