Publish Date: Sat, 25 Dec 2021 (20:57 IST)
Updated Date: Sat, 25 Dec 2021 (21:00 IST)
ಸೋಂಕು ತಡೆಗೆ ರಾಜ್ಯಗಳು ಮತ್ತಷ್ಟು ಎಚ್ಚರಿಕೆ ವಹಿಸಬೇಕು: ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್.
ಹೊಸದಿಲ್ಲಿ: ದೇಶದಲ್ಲಿ ಒಮಿಕ್ರೋನ್ ಪ್ರಕರಣಗಳು ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿ ದಿಡೀರನೆ ಏರಿಕೆ ಕಂಡಿದೆ. ದೇಶದಲ್ಲಿ 358 ಪ್ರಕರಣಗಳು ದಾಖಲಾಗಿದೆ. ಕರ್ನಾಟಕ ರಾಜ್ಯದಲ್ಲೂ ಕೂಡ ಒಂದೇ ದಿನದಲ್ಲಿ 405 ಕೋವಿಡ್ ಪ್ರಕರಣಗಳು ಕೂಡ ದಾಖಲಾಗಿದೆ.
ಸೋಂಕು ತಡೆಗೆ ರಾಜ್ಯಗಳು ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಯುರೋಪ್ ಅಮೆರಿಕದಲ್ಲಿ ಒಮಿಕ್ರೋನ್ ಪ್ರಕರಣಗಳು ಹೆಚ್ಚಿದ್ದು, ಭಾರತದಲ್ಲಿ ಮೂರನೇ ಅಲೆಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸುವ ಅಗತ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.