Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಬೂಸ್ಟರ್ ಡೋಸ್?

ಭಾರತದಲ್ಲಿ ಬೂಸ್ಟರ್ ಡೋಸ್?
ನವದೆಹಲಿ , ಶನಿವಾರ, 25 ಡಿಸೆಂಬರ್ 2021 (14:23 IST)
ಓಮಿಕ್ರಾನ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಭಾರತದಲ್ಲಿ ಬೂಸ್ಟರ್ ಡೋಸ್ ಲಸಿಕೆ ನೀಡಬೇಕು ಅನ್ನೋ ಕೂಗು ಹೆಚ್ಚಾಗಿ ಕೇಳಿಬರುತ್ತಿದೆ.
 
ಆದರೆ ಬೂಸ್ಟರ್ ಡೋಸ್ ಕುರಿತು ಅಂಕಿ ಅಂಶಗಳು ಲಭ್ಯವಾಗದ ಕಾರಣ ಕೇಂದ್ರ ಸರ್ಕಾರಕ್ಕೆ ಯಾವುದೇ ನಿಖರತೆ ಇರಲಿಲ್ಲ. ಇದೀಗ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR) ಬೂಸ್ಟರ್ ಡೋಸ್ ಕುರಿತು ಅಂಕಿ ಅಂಶಗಳನ್ನು ಕಲೆಹಾಕುತ್ತಿದೆ.

ವಿದೇಶಗಳಲ್ಲಿ ಪ್ರಾಯೋಗಿಕ ಹಂತದಲ್ಲಿ ನೀಡಿದ ಬೂಸ್ಟರ್ ಡೋಸ್ ಫಲಿತಾಂಶದ ವಿವರದ ಅಧ್ಯಯನದಲ್ಲಿ ತೊಡಗಿದೆ. ಇದರ ಜೊತೆಗೆ ICMR ಲಸಿಕೆ ಪರೀಕ್ಷೆ ನಡೆಸುತ್ತಿದೆ. ಕೋವಿಡ್ ಲಸಿಕೆ ಒಮಿಕ್ರಾನ್ ಮೇಲೆ ಪರಿಣಾಮ ಬೀರಲಿದೆಯಾ ಅನ್ನೋ ಸಂಶೋಧನೆಗಳು ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಗತ್ತು 4ನೇ ಅಲೆಗೆ ಸಾಕ್ಷಿಯಾಗುತ್ತಿದೆ!