Select Your Language

Notifications

webdunia
webdunia
webdunia
webdunia

ಬೆಂಗಳೂರಿನ ಈ ಏರಿಯಾಗಳಲ್ಲಿ ನಾಳೆಯಿಂದ ಎರಡು ದಿನ ಪವರ್‌ ಕಟ್: ಇಲ್ಲಿದೆ ಮಾಹಿತಿ

Two-day Power Cut
bangalore , ಶನಿವಾರ, 25 ಡಿಸೆಂಬರ್ 2021 (20:52 IST)
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್‌ ನಿರ್ವಹಣಾ ಕಾರ್ಯ ನಡೆಸುತ್ತಿರುವ ಕಾರಣ ಡಿ.26 ಹಾಗೂ ಡಿ.27ರಂದು ಈ ಏರಿಯಾಗಳಲ್ಲಿ ಪವರ್‌ ಕಟ್‌ ಆಗುವ ಸಾಧ್ಯತೆ ಇದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಡಿ.26ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧ ಏರಿಯಾಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ, ಎಲ್ಲರೂ ಸಹಕರಿಸಬೇಕಾಗಿ ಬೆಸ್ಕಾಂ ಮನವಿ ಮಾಡಿದೆ.
ಟಾಟಾ ಐಬಿಎಂ, ಎಸ್.ಜೆ.ಆರ್. ಪಾರ್ಕ್, ಸುಮಧುರಾ ಅಪಾರ್ಟ್ಮೆಂಟ್ ಸಮುಚ್ಚಯ, ನಲ್ಲೂರಹಳ್ಳಿ, ಯುಟಿಎಲ್ ಕಂಪನಿ, ವಿ.ಕೆ.ಟೆಕ್ ಪಾರ್ಕ್, ಗಾಯತ್ರಿ ಟೆಕ್ ಪಾರ್ಕ್, ಮೈಕ್ರೊ ಚಿಪ್, ವೈದೇಹಿ ಆಸ್ಪತ್ರೆ, ಸತ್ಯ ಸಾಯಿ ಬಾಬಾ ಆಸ್ಪತ್ರೆ, ಚನ್ನಮ್ಮ ಬಡಾವಣೆಯಲ್ಲಿ ಪವರ್‌ ಕಟ್‌ ಆಗಲಿದೆ.
ಅನ್ನಪೂರ್ಣೇಶ್ವರಿ ಬಡಾವಣೆ, ವಿದ್ಯಾಪೀಠ ರಸ್ತೆ, ಡಿ.ಬಿ. ಕಲ್ಲು, ಬಿ.ಜಿ.ಎಸ್. ಆಸ್ಪತ್ರೆ ರಸ್ತೆ, ಸಿದ್ಧಗಂಗಾ ಬಡಾವಣೆ, ಮಾರಣ್ಣ ಬಡಾವಣೆ, ಉಲ್ಲಾಳ ನಗರ, ಮಾರುತಿನಗರ, ಕುವೆಂಪು ಮುಖ್ಯ ರಸ್ತೆಯಲ್ಲಿ ವಿದ್ಯುತ್‌ ಪೂರೈಕೆ ಇರುವುದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಜನತೆಗೆ ಕ್ರಿಸ್ಮಸ್‌ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ