Publish Date: Mon, 15 Nov 2021 (17:24 IST)
Updated Date: Mon, 15 Nov 2021 (17:27 IST)
ಬೆಂಗಳೂರು : ಇಂದಿನಿಂದ ಬುಧವಾರದವರೆಗೂ (ನ. 17) ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ ಬೆಂಗಳೂರಿಗರು ಬದಲಿ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
3 ದಿನಗಳ ಪವರ್ ಕಟ್ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿದೆ. ಹಾಗಾದರೆ, ಬೆಂಗಳೂರಿನ ಯಾವೆಲ್ಲ ಏರಿಯಾಗಳಲ್ಲಿ ಇಂದಿನಿಂದ 3 ದಿನ ಪವರ್ ಕಟ್ ಇರಲಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಟೀಚರ್ಸ್ ಕಾಲೋನಿ, ಶ್ರೀನಿವಾಸನಗರ, ಬ್ಯಾಂಕ್ ಕಾಲೋನಿ, ಕತ್ರಿಗುಪ್ಪೆ ಮುಂತಾದ ಏರಿಯಾಗಳಲ್ಲಿ ಇಂದು ಬೆಸ್ಕಾಂ ಮತ್ತು ಕೆಪಿಟಿಸಿಎಲ್ನ ಕೇಬಲ್ ಕನ್ವರ್ಷನ್ ಕೆಲಸ ನಡೆಯುತ್ತಿರುವುದರಿಂದ ಇಂದು ಪವರ್ ಕಟ್ ಇರಲಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಜಕ್ಕಸಂದ್ರ, ಹೆಚ್ಎಸ್ಆರ್ ಸೆಕ್ಟರ್ 5, ಟೀಚರ್ಸ್ ಕಾಲೋನಿ, ವೆಂಕಟಾಪುರ ಭಾಗಗಳು, ಮೀನಾಕ್ಷಿ ಲೇಔಟ್, ಮೈಸೂರು ಬ್ಯಾಂಕ್ ಕಾಲೋನಿ, ಶ್ರೀನಿವಾಸನಗರ, ಕತ್ರಿಗುಪ್ಪೆ, ಆವಲಹಳ್ಳಿ, ಎಸ್ಬಿಐ ಲೇಔಟ್, ಬಿಳೇಕಹಳ್ಳಿಯಲ್ಲಿ ಪವರ್ ಕಟ್ ಇರಲಿದೆ.
ನಾಳೆ ಅಂದರೆ ಮಂಗಳವಾರ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಸೆಕ್ಟರ್ 6, ಬಿಡಿಎ ಅಂಜನಾಪುರ, ವೀವರ್ಸ್ ಕಾಲೋನಿ, ಕೃಷ್ಣಪ್ಪ ಲೇಔಟ್, ಮೀನಾಕ್ಷಿ ಲೇಔಟ್, ಆವಲಹಳ್ಳಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ.
ಬುಧವಾರ (ನ. 17) ಹೆಚ್ಎಸ್ಆರ್ ಲೇಔಟ್ 17ನೇ ಕ್ರಾಸ್, ಅಂಜನಾಪುರ 3ನೇ ಬ್ಲಾಕ್, ಜಯರಾಮ ರೆಡ್ಡಿ ಲೇಔಟ್, ಜಿಬಿ ಪಾಳ್ಯ ರಸ್ತೆ, ರಾಘವನ ಪಾಳ್ಯ, ಆವಲಹಳ್ಳಿ, ಸಹಾರಾ ಬೇಕರಿ ರಸ್ತೆಯಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.