Publish Date: Fri, 15 Oct 2021 (08:09 IST)
Updated Date: Thu, 14 Oct 2021 (23:14 IST)
ಬೆಂಗಳೂರು : ಹಬ್ಬಕ್ಕೆ ಸಾಲು ಸಾಲು ರಜೆಗಳು ಇರುವುದರಿಂದ ಲಾಂಗ್ ವೀಕೆಂಡ್ನ ಖುಷಿಯಲ್ಲಿ ಇರುವ ಬೆಂಗಳೂರಿಗರಿಗೆ ಈ ವೀಕೆಂಡ್ನಿಂದ 1 ವಾರ ಪವರ್ ಕಟ್ ಸಮಸ್ಯೆ ಎದುರಾಗಲಿದೆ.
ಇದೇ ಶನಿವಾರದಿಂದ ಅ. 22ರವರೆಗೂ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಮುಂದಿನ ವಾರ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಹೆಚ್ಎಸ್ಆರ್ ಲೇಔಟ್, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಜಂಬೂಸವಾರಿ ದಿಣ್ಣೆ ಸೇರಿ ಹಲವು ಏರಿಯಾಗಳಲ್ಲಿ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಅ. 16ರಂದು ಹೊಂಗಸಂದ್ರ 10ರಿಂದ 16ನೇ ಮುಖ್ಯರಸ್ತೆ, ಮೈಕೋ ಲೇಔಟ್, ಬಿಟಿಎಂ ಲೇಔಟ್, ನಾಗನಾಥಪುರ, ಸಿಕೆ ನಗರ, ಹೊಸ ರೋಡ್, ದೊಡ್ಡತೋಗೂರು, ಹೆಚ್ಎಸ್ಆರ್ ಲೇಔಟ್, ನಾಯಕ್ ಲೇಔಟ್, ಸುರಭಿನಗರ, ಜಂಬೂಸವಾರಿ ದಿಣ್ಣೆ, ಐಡಿಬಿಐ ಲೇಔಟ್, ಸೌತ್ ಅವೆನ್ಯೂ, ಗೊಟ್ಟಿಗೆರೆ ಮುಖ್ಯರಸ್ತೆ, ಮೀನಾಕ್ಷಿ ಲೇಔಟ್ ಸೇರಿದಂತೆ ಹಲವೆಡೆ ಪವರ್ ಕಟ್ ಇರಲಿದೆ.