Select Your Language

Notifications

webdunia
webdunia
webdunia
webdunia

ಪೊಲೀಸ್ ಇಲಾಖೆಗೆ 200 ಕೋಟಿ ರೂ. ಅನುದಾನ: ಆರಗ ಜ್ಞಾನೇಂದ್ರ

ಪೊಲೀಸ್ ಇಲಾಖೆಗೆ 200 ಕೋಟಿ ರೂ. ಅನುದಾನ: ಆರಗ ಜ್ಞಾನೇಂದ್ರ
bangalore , ಗುರುವಾರ, 14 ಅಕ್ಟೋಬರ್ 2021 (21:11 IST)
ಕಳೆದರಡು ವರ್ಷಗಳಲ್ಲಿ ಪೊಲೀಸ್ ಇಲಾಖೆಗೆ 200 ಕೋಟಿ ರು. ಅನುದಾನವನ್ನು ರಾಜ್ಯಸರ್ಕಾರ ನೀಡಿದ್ದು, ಸ್ವಾತಂತ್ರ್ಯ ಬಂದ ನಂತರದಲ್ಲಿ ಇಷ್ಟು ಮೊತ್ತದ ಹಣವನ್ನು ಯಾರ ಕಾಲದಲ್ಲಿಯೂ ನೀಡಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬುಧವಾರ ನಗರದ ಡಿಎಆರ್ ಆವರಣದಲ್ಲಿ 36 ಪೊಲೀಸ್ ವಸತಿ ಗೃಹ, ಡಿಎಆರ್ ಆಡಳಿತ ಕಚೇರಿ ಕಟ್ಟಡ, ಶ್ವಾನದಳ, ಸೆಂಟ್ರಲ್ ಪೊಲೀಸ್ ಠಾಣೆ ಕಟ್ಟಡಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಪ್ರಸಕ್ತ ವರ್ಷ ರಾಜ್ಯದಲ್ಲಿ 100 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ. ಇದುವರೆಗೆ ವರ್ಷಕ್ಕೆ 4 ರಿಂದ 5 ಪೊಲೀಸ್ ಠಾಣೆಗಳು ಮಾತ್ರ ನಿರ್ಮಾಣವಾಗುತ್ತಿದ್ದವು ಎಂದು ತಿಳಿಸಿದರು.ಪೊಲೀಸ್ ವಸತಿ ಗೃಹದ ಸಮಸ್ಯೆ ತೀವ್ರವಾಗಿರುವುದನ್ನು ಮನಗಂಡು 11 ಸಾವಿರ ವಸತಿಗೃಹಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗಿದೆ.ಇನ್ನೂ 10 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು ನಿರ್ಧರಿಸಿ ಟೆಂಡರ್ ಕರೆಯಲಾಗಿದೆ.ಇದುವರೆಗಿದ್ದ ಸಿಂಗಲ್ ಬೆಡ್‌ರೂಂಗೆ ಬದಲಾಗಿ ಎರಡು ಬೆಡ್‌ರೂಂಗಳುಳ್ಳ ವಸತಿ ಗೃಹಗಳನ್ನು ನಿರ್ಮಿಸಲಾಗುವುದು ಎಂದರು.ರಾಜ್ಯದಲ್ಲಿ 140 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ.
ಪಿಎಸ್‌ಐ ಹಂತದ ಠಾಣೆಗಳನ್ನು ಸಿಪಿಐ ದರ್ಜೆಗೇರಿಸಲಾಗಿದೆ.ಸೈಬರ್ ವಿಭಾಗವನ್ನು ಶಕ್ತಿಯುತಗೊಳಿಸಿದ್ದೇವೆ. ಇದಕ್ಕೆ ಮತ್ತಷ್ಟು ಪರಿಣಾಮಕಾರಿಯಾಗಿಸಲು ಗುಜರಾತ್ ರಾಜ್ಯದ ಸೈಬರ್ ವಿಭಾಗದೊಂದಿಗೆ ಒಪ್ಪಂದ ಮಾಡಿಕೊಂಡು ಹೆಚ್ಚಿನ ತರಬೇತಿ ಕೊಡಿಸಲಾಗುತ್ತಿದೆ.ಜಿಲ್ಲೆಯಲ್ಲಿಯೂ ಸೈಬರ್ ವಿಭಾಗ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಮಾಡಿರುವುದಾಗಿ ಹೇಳಿದರು.
ರಾಜ್ಯದಲ್ಲಿ ಕೊಲೆ, ಅತ್ಯಾಚಾರ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳು ನಡೆದ ಸಂದರ್ಭದಲ್ಲಿ ಎ್ಎಸ್‌ಎಲ್ ತಜ್ಞರು ಸ್ಥಳಕ್ಕೆ ಆಗಮಿಸಬೇಕು, ಸಾಕ್ಷ್ಯಗಳನ್ನು ನೇರವಾಗಿ ಸಂಗ್ರಹಿಸಬೇಕೆಂಬ ಕಾರಣಕ್ಕೆ 250 ವಿ ವಿಜ್ಞಾನ ತಜ್ಞರನ್ನು ನೇಮಕ ಮಾಡಿಕೊಳ್ಳಲು ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಲಾಗಿದೆ.ಸಚಿವ ಕೆ.ಸಿ.ನಾರಾಯಣಗೌಡ, ಶಾಸಕ ಎಂ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯರಾದ ಎನ್.ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ, ನಗರಸಭಾ ಅಧ್ಯಕ್ಷ ಹೆಚ್.ಎಸ್.ಮಂಜು, ರಾಜ್ಯ ಐಜಿಪಿ ಪ್ರವೀಣ್‌ಸೂದ್, ಐಪಿಎಸ್ ಅಕಾರಿ ಎ.ಎಸ್.ಎನ್.ಮೂರ್ತಿ, ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ಜಿಲ್ಲಾ ಪೊಲೀಸ್ ಅೀಕ್ಷಕಿ ಡಾ.ಎಂ.ಅಶ್ವಿನಿ, ಎಎಸ್‌ಪಿ ಡಾ.ಧನಂಜಯ್ ಅವರು ಇದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಜಿಂಕೆ ಲೋಕದಲ್ಲಿ ಶ್ವಾನಗಳ ದರ್ಬಾರ್