Select Your Language

Notifications

webdunia
webdunia
webdunia
webdunia

ಬೆದರಿಕೆ ಕರೆ ಮಾಡಿದ್ದ ನವನೀತ್ ಪ್ರಸಾದ್ ನನ್ನ ಬಂಧಿಸಿರೋ ಬೆಳ್ಳಂದೂರು ಪೊಲೀಸರು ..!

ಬೆದರಿಕೆ ಕರೆ ಮಾಡಿದ್ದ  ನವನೀತ್ ಪ್ರಸಾದ್ ನನ್ನ ಬಂಧಿಸಿರೋ ಬೆಳ್ಳಂದೂರು ಪೊಲೀಸರು ..!
bangalore , ಶನಿವಾರ, 17 ಜೂನ್ 2023 (19:25 IST)
ಬೆಳ್ಳಂಬೆಳಗ್ಗೆ ಕಚೇರಿಗೆ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗಿದ್ರು.ಅದೇ ವೇಳೆಗೆ ಕಚೇರಿ ನಂಬರ್ ಗೆ ಒಂದ್ ಕರೆ ಬಂದಿತ್ತು. ಕಾಲ್ ಬಂತು ಅಂತ ಕಚೇರಿಯ ರಿಸೆಪ್ಷನಿಸ್ಟ್ ಕಾಲ್‌ ರಿಸೀವ್ ಮಾಡ್ತಿದ್ದಂತೆ ಹೆಲೋ ಅಂದಿದ್ರು. ಹಾಗೆ ಮಾತಾಡ್ತಿದ್ದ ವೇಳೆ ಕಾಲ್ ರಿಸೀವ್ ಮಾಡಿದ ರಿಸೆಪ್ಷನಿಸ್ಟ್ ಒಂದ್ ಕ್ಷಣ ಬೆಚ್ಚಿ ಬಿದ್ದಿದ್ದಿಉಲ, ಎಲ್ಲರು ಕಚೇರಿಯಿಂದ ಓಡಿ ಬಂದಿದ್ರು. ಅಷ್ಟರಲ್ಲಾಗಿ ಪೊಲೀಸ್ರಿಗೂ ಸುದ್ದಿ ಮುಟ್ಟಿತ್ತು. ಹಾಗೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು ತನಿಖೆ ಕೈಗೊಂಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಕಂಪನಿಯ ಮಾಜಿ ಉದ್ಯೋಗಿಯಿಂದಲೇ ಈ ಬಾಂಬ್ ಬೆದರಿಕೆ ಬಂದಿದೆ‌ ಅನ್ನೋದು ಬೆಳಕಿಗೆ ಬಂದಿದ್ದು, ಸದ್ಯ ತನಿಖೆ ಮುಂದುವರೆಸಿದ್ದ ಬೆಳ್ಳಂದೂರು ಪೊಲೀಸ್ರು ಆರೋಪಿ‌ ನವನೀತ್ ಪ್ರಸಾದ್ ಎಂಬಾತನನ್ನ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ನವನೀತ್ ಪ್ರಸಾದ್ ಬಾಂಬ್ ಬೆದರಿಕೆ ಕರೆ ಮಾಡಲು ಕಾರಣ ಏನೆಂದು ಬಾಯ್ಬಿಟ್ಟು, ತಪ್ಪೊಪ್ಪಿಕೊಂಡಿದ್ದಾರೆ. ಆತ ಹೇಳಿದ ರೀಸನ್ ಮಾತ್ರ ತುಂಬಾ ಸಿಂಪಲ್ ಆಗಿದ್ರು, ಅದ್ರಿಂದ ಮಾತ್ರ ಪೊಲೀಸ್ರಿಗೆ ಪೀಕಲಾಟ ಶುರುವಾಗಿತ್ತು.

ಬೆಳ್ಳಂದೂರು ಪೊಲೀಸ್ರು ತನಿಖೆ ಕೈಗೊಂಡು ಆರೋಪಿಯನ್ನ ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ. ಆದ್ರೆ, ಸಹೋದ್ಯೋಗಿ ಮೇಲಿನ‌ಕೋಪಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿ ಪೊಲೀಸ್ರಿಗೆ ಟೆನ್ಷನ್ ಮಾಡಿದ್ದ ಆರೋಪಿ ಮಾಡಿದ್ದುಣ್ಣೋ ಮಹರಾಯ ಅಂತ ಕಂಬಿ ಹಿಂದೆ ಸೇರಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರ ಸ್ವಾಗತ- ಲೊಕೇಶ್ ತಾಳಿಕಟ್ಟೆ