Publish Date: Sun, 26 Mar 2023 (20:01 IST)
Updated Date: Sun, 26 Mar 2023 (20:08 IST)
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಮಾತನಾಡಿ, ಸಿಎಂ ಬೊಮ್ಮಾಯಿ ಸಮುದಾಯಕ್ಕೆ ಮೋಸ ಮಾಡ್ತಿದ್ದಾರೆ. ಮೀಸಲಾತಿಯನ್ನು ೯೦ ದಿನಗಳಲ್ಲಿ ೩ ಬಾರಿ ಬದಲಾವಣೆ ಮಾಡಿರೊದು ಇದೇ ಮೊದಲಬಾರಿ ಅನಿಸುತ್ತೆ ಮೀಸಲಾತಿ ವಿಚಾರದಲ್ಲಿ ರಾಜ್ಯದ ಜನತೆಗೆ ಮಾಡುತ್ತಿರುವ ಮಹಾಮೋಸ ಅಂತ ಕಿಡಿಕಾರಿದ್ರು. ಇನ್ನೂ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ಶಕುನಿಗೆ ಹೋಲಿಸಿದ ಸುರ್ಜೆವಾಲ ಬೊಮ್ಮಾಯಿ ಮಹಾಭಾರತದಲ್ಲಿ ಬರುವ ಶಕುನಿಯಂತೆ ಕೊನೆಗೆ ಪಾಂಡವರೇ ಗೆಲ್ಲೋದು 420 ಬೊಮ್ಮಾಯಿ ಸರ್ಕಾರ ಅಂತ ಕಿಡಿಕಾರಿದ್ರು ಇನ್ನೂ ಮೀಸಲಾತಿ ವಿಚಾರವಾಗಿ ಸರ್ಕಾರದ ತೆಗೆದುಕೊಂಡ ನಿರ್ದಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಚಾಟಿ ಬೀಸುದ್ರು.ಬಿಜೆಪಿಯವರು ಮೀಸಲಾತಿ ವಿಚಾರವಾಗಿ ಗೊಂದಲ ಸೃಷ್ಟಿಸಿ ಸೇಡಿನ ರಾಜಕಾರಣ ಮಾಡ್ತಿದ್ದಾರೆ. ದರ್ಮ ಹಾಗೂ ಜಾತಿ ಆದಾರದ ಮೇಲೆ ವಿಭಜನೆ ಮಾಡಿ,ಮೀಸಲಾತಿ ವರ್ಗೀಕರಣ ಮಾಡುವುದರ ಮೂಲಕ ದ್ರೋಹ ಎಸುಗುತ್ತಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.