Publish Date: Sun, 26 Mar 2023 (18:00 IST)
Updated Date: Sun, 26 Mar 2023 (17:51 IST)
ರಾಹುಲ್ ಗಾಂಧಿಗೆ ಶಿಕ್ಷೆಯನ್ನು ವಿರೋಧಿಸಿ ದೇಶದ ವಿವಿಧೆಡೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೇಶ್ ನಾಯಕರು ಬಿಜೆಪಿ ವಿರುದ್ಧ ವಾಗ್ಬಾಣವನ್ನೇ ಸಿಡಿಸಿದ್ಧಾರೆ.ಕಳ್ಳರನ್ನು ಕಳ್ಳ ಎಂದು ಕರೆಯುವ ಹಕ್ಕು ಇಲ್ವಾ ಎಂದು ಪ್ರಶ್ನಿಸಿದ್ದಾರೆ.ಇದು ಹಿಟ್ಲರ್ನ ಜರ್ಮನಿ, ಮುಸೊಲಿನಿಯ ಇಟಲಿ ದೇಶ ಅಲ್ಲ ಇದು ಭಾರತ. ಆಡಳಿತ ಪಕ್ಷದ ತಪ್ಪುಗಳನ್ ಎತ್ತಿ ಹಿಡಿಯಲು ಪ್ರಬಲವಾದ ವಿರೋಧ ಪಕ್ಷ ಇರಬೇಕು ಆಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ ಆಗುತ್ತದೆ ಎಂದು ಮೋದಿ ಸರ್ಕಾರ ವಿರುದ್ದ ಬೆಂಕಿ ಉಗಿಳಿದ್ರು, ಇನ್ನು ಮೋದಿ ಸರ್ ನೇಮ್ ಬಳಸಿ ಮಾತನಾಡಿದ್ರು. ಆದ್ರೆ ಮಹಾನ್ ಮೋಸಗಾರ ಅದಾನಿ ಬಗ್ಗೆ ಪ್ರಧಾನಿ ಸಂಬಂಧದ ಬಗ್ಗೆ ಮಾತನಾಡಿದ್ದಕ್ಕೆ ಈಗ ಕೇಸ್ ಓಪನ್ ಆಯ್ತು. ಆಪರೇಷನ್ ಕಮಲ ಮಾಡುವುದು ಬೇಡ, ಶಾಸಕರ ಮೇಲೆ ಕೇಸ್ ಹಾಕಿ ಜಡ್ಜನ್ನ ಬುಕ್ ಮಾಡಿಕೊಂಡರೆ ಸಾಕು. ಯಾರಾದರೂ ಎರಡು ವರ್ಷ ಶಿಕ್ಷೆ ಕೊಡ್ತಾರೇನ್ರೀ? ಎಂದು ವಾಗ್ದಾಳಿ ನಡೆಸಿದರು……ಏಪ್ರಿಲ್ 5ರಂದು ಕೋಲಾರದಲ್ಲಿ ದೊಡ್ಡ ರ್ಯಾಲಿ ಮಾಡುತ್ಥೇವೆ ಎಲ್ಲರೂ ಭಾಗಿಯಾಗುವ ಮೂಲಕ ರಾಹುಲ್ ಗಾಂಧಿ ಬೆನ್ನಿಗೆ ನಿಲ್ಲಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂಕಲ್ಪ ಸತ್ಯಾಗ್ರಹದಲ್ಲಿಮನವಿ ಮಾಡಿದ್ದಾರೆ.