Publish Date: Fri, 02 Dec 2022 (20:12 IST)
Updated Date: Fri, 02 Dec 2022 (20:16 IST)
VHP ಮುಖಂಡನಿಗೆ ಜೈಲಿನಿಂದಲೇ ಕಿಡಿಗೇಡಿಗಳಿಂದ ಬೆದರಿಕೆ ಕರೆ ಬಂದಿದ್ದು, ಬೆದರಿಕೆ ಹಾಕಿದವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಟಿಪ್ಪು ನಗರದ ಅಲ್ತಾಫ್ ಅಲಿಯಾಸ್ ಕಟ್ಟಪ್ಪ ಎಂಬಾತನನ್ನು ಬಂಧಿಸಲಾಗಿದೆ. ನವೆಂಬರ್ 25 ರಂದು ಬೆಳಿಗ್ಗೆ 11 ಗಂಟೆಯಿಂದ 26 ರ ಸಂಜೆ 7 ಗಂಟೆಯವರಿಗೆ ಜಿತೇಂದ್ರ ಎಂಬುವವರಿಗೆ ವಾಟ್ಸಾಪ್ ಕರೆ ಬಂದಿದೆ. ಹಣ ನೀಡು ಇಲ್ಲದಿದ್ದರೆ ನಿನ್ನನ್ನು ಹತ್ಯೆ ಮಾಡಲಾಗುವುದು ಎಂದು ಹೆದರಿಸಲಾಗಿತ್ತಂತೆ. ಗುಲ್ಬರ್ಗ ಮತ್ತು ಬೆಳಗಾವಿ ಹಿಂಡಲಗಾ ಜೈಲಿನಿಂದ ಕರೆ ಬಂದಿದ್ದು, ಭದ್ರಾವತಿ ನಾಗ ಎಂಬಾತ ಮೊದಲು 10 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ನಂತರ 25 ಸಾವಿರ ರೂಪಾಯಿಗೆ ಒಪ್ಪಿಕೊಂಡಿದ್ದಾನೆ. ಫೋನ್ ಪೇ, ಗೂಗಲ್ ಪೇ ಮೂಲಕ ಹಣ ನೀಡುವಂತೆ ಒತ್ತಾಯ ಮಾಡಲಾಗಿದ್ದು, ಆಗ ಜಿತೇಂದ್ರ ಖುದ್ದು ಹಣ ನೀಡುವುದಾಗಿ ಹೇಳಿದ್ದಾನೆ. ನಿಮ್ಮವರನ್ನು ಕಳಿಸಿ, ಗೋಪಾಳದ ಕೆನರಾ ಬ್ಯಾಂಕ್ ಬಳಿ ಇರುತ್ತೇನೆ ಎಂದು ಜಿತೇಂದ್ರ ಹೇಳಿದ್ದಾನೆ. ಅದರಂತೆ ಕರೆ ಮಾಡಿದ್ದ ವ್ಯಕ್ತಿ ಆತನ ಸಹಚರ ಅಲ್ತಾಫ್ನನ್ನು ಕಳುಹಿಸಿದ್ದ. ಆಗ ತುಂಗಾನಗರ ಠಾಣೆ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಜೈಲಿನಿಂದ ಕರೆ ಮಾಡಿದ್ದು ಯಾರು, ಬಂಧನವಾದ ವ್ಯಕ್ತಿಗಳು ಯಾರು ಎಂದು ತನಿಖೆಯಿಂದ ತಿಳಿದು ಬರಬೇಕಿದೆ.