Publish Date: Fri, 11 Mar 2022 (11:46 IST)
Updated Date: Fri, 11 Mar 2022 (09:28 IST)
ನವದೆಹಲಿ: ಉದ್ಯೋಗ ಕೊಡಿಸುವುದಾಗಿ ಹೇಳಿ ನಕಲಿ ಕಾಲ್ ಸೆಂಟರ್ ತೆರೆದು ಜನರಿಗೆ ವಂಚಿಸುತ್ತಿದ್ದ ಯುವಕ ಮತ್ತು ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಬ್ಬರೂ ಉದ್ಯೋಗ ಕೊಡಿಸುವುದಾಗಿ ಬೇರೆ ಬೇರೆ ಜನರಿಗೆ ಕರೆ ಮಾಡಿ ಅವರಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಸುಳ್ಳು ಭರವಸೆ ಕೊಡುತ್ತಿದ್ದರು. ಬಳಿಕ ಅವರಿಂದ ನೋಂದಣಿ ಫೀಸ್ ಎಂದು 4 ರಿಂದ 5 ಸಾವಿರ ರೂ. ಪಡೆದು ವಂಚಿಸುತ್ತಿದ್ದರು.
ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.